CONNECT WITH US  

ಬ್ರಸೆಲ್ಸ್‌ ಉಗ್ರ ದಾಳಿಯಲ್ಲಿ ಮೃತಪಟ್ಟವರಿಗೆ ಮೋದಿ ಶ್ರದ್ಧಾಂಜಲಿ

ಬ್ರಸೆಲ್ಸ್‌ : ಪ್ರಧಾನಿ ನರೇಂದ್ರ ಮೋದಿ ಅವರಿಂದು 13ನೇ ಭಾರತ - ಐರೋಪ್ಯ ಒಕ್ಕೂಟ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗಾಗಮಿಸಿದ್ದು ಈ ಸಂದರ್ಭದಲ್ಲಿ ಅವರು ಬ್ರಸೆಲ್ಸ್‌ ಮೇಲಿನ ಉಗ್ರ ದಾಳಿಯಲ್ಲಿ ಮೃತಪಟ್ಟವರ ಸ್ಮಾರಕಕ್ಕೆ ಪುಷ್ಪ ಗುತ್ಛ ಇರಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.

ಬ್ರಸೆಲ್ಸ್‌ ಮೆಟ್ರೋ ರೈಲು ಬಾಂಬ್‌ ದಾಳಿಯಲ್ಲಿ ಮೃತಪಟ್ಟಿದ್ದ ಇನ್‌ಫೋಸಿಸ್‌ ಟೆಕಿ ರಾಘವೇಂದ್ರನ್‌ ಗಣೇಶನ್‌ ಅವರನ್ನೂ ಸ್ಮರಿಸಿಕೊಂಡ ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಅವರಿಗೂ ಶ್ರದ್ಧಾಂಜಲಿ ಅರ್ಪಿಸಿದರು.

ಬೆಲ್ಜಿಯಂ ಪ್ರಧಾನಿ ಚಾರ್ಲ್ಸ್‌ ಮೈಕೆಲ್‌ ಅವರೊಂದಿಗೆ ಈಗ ಸೀಮಿತ ಮಾತುಕತೆ ನಡೆಸುತ್ತಿರುವ ಮೋದಿ ಅವರು ಭಾರತವು ಯರೋಪ್‌ನ ತನ್ನ ಅತ್ಯಂತ ಪ್ರಮುಖ ಭಾಗೀದಾರ ದೇಶವಾಗಿರುವ ಬೆಲ್ಜಿಯಂ ಜತೆಗೂಡಿ ಆರ್ಥಿಕಾಭಿವೃದ್ಧಿಗೆ ದುಡಿಯಲು ಬಯಸಿದೆ ಎಂದು ಮೋದಿ ಹೇಳಿದರು.

ಇದಕ್ಕೆ ಮೊದಲು ಮೋದಿ ಅವರು ಎಗ್‌ಮಾಂಟ್‌ ಪ್ಯಾಲೇಸ್‌ನಲ್ಲಿ ಪರೇಡ್‌ ವೀಕ್ಷಿಸಿ ಗೌರವ ಸ್ವೀಕರಿಸಿದರು. ಮಾಲ್‌ಬೆಕ್‌ ಮೆಟ್ರೋ ಸ್ಟೇಶನ್‌ನಲ್ಲಿ ಈಚಿನ ಉಗ್ರ ದಾಳಿಯಲ್ಲಿ ಮೃತಪಟ್ಟಿದ್ದ ಭಾರತದ ರಾಘವೇಂದ್ರನ್‌ ಗಣೇಶನ್‌ ಮತ್ತು ಇತರರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಉಗ್ರ ದಾಳಿಯ ಬಲಿಪಶುವಾಗಿರುವ ಬೆಲ್ಜಿಯಂ ಎದುರಿಸುತ್ತಿರುವ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವು ಅದರ ಜತೆಗಿದೆ ಎಂದು ಮೋದಿ ಹೇಳಿದರು.
 

Trending videos

Back to Top