CONNECT WITH US  

ಪಿಒಕೆ, ಗಿಲ್ಗಿಟ್ ನಲ್ಲಿ ಪಾಕ್‌ವಿಮಾನ ಸೇವೆ ಸ್ಥಗಿತ

ಇಸ್ಲಾಮಾಬಾದ್‌: ಪಾಕಿಸ್ತಾನ ಕುಮ್ಮಕ್ಕಿನಿಂದ ಭಾರತದ ಸೇನಾ ನೆಲೆ ಮೇಲೆ ಉಗ್ರ ದಾಳಿ ನಡೆದು ಉಭಯ ರಾಷ್ಟ್ರಗಳ ನಡುವೆ ತೆÌàಷಮಯ ವಾತಾವರಣ ಉದ್ಭವಿಸಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪಾಕಿಸ್ತಾನವು, ಭಾರತಕ್ಕೆ ಹೊಂದಿಕೊಂಡಿರುವ ತನ್ನ ಪ್ರದೇಶಗಳಲ್ಲಿ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದೆ.

ಪಾಕ್‌ ಆಕ್ರಮಿತ ಕಾಶ್ಮೀರ, ಗಿಲ್ಗಿಟ್-ಬಾಲ್ಟಿಸ್ತಾನ ಪ್ರಾಂತ್ಯ ಹಾಗೂ ಖೈಬರ್‌ ಫ‌ಖೂ¤ನ್‌ಖ್ವಾ ಪ್ರದೇಶದಲ್ಲಿ ಬುಧವಾರ ತನ್ನ ಎಲ್ಲಾ ವಿಮಾನ ಸೇವೆಗಳನ್ನು ರದ್ದುಗೊಳಿಸಿರುವುದಾಗಿ ಪಾಕಿಸ್ತಾನ ವಿಮಾನ ಪ್ರಾಧಿಕಾರ ತಿಳಿಸಿದೆ. ಆದರೆ, ಇದಕ್ಕೆ ನಿರ್ದಿಷ್ಟವಾದ ಕಾರಣಗಳನ್ನು ತಿಳಿಸಿಲ್ಲ. ಈ ಮೂಲಕ ಭಾರತದ ಸಂಭವನೀಯ ಪ್ರತಿ ದಾಳಿಗೆ ಹೆದರಿರುವ ಪಾಕಿಸ್ತಾನ ತನ್ನ ಮೇಲೆ "ಬಾಹ್ಯಾಕಾಶ ಪ್ರಯಾಣ'ಕ್ಕೆ ನಿರ್ಬಂಧ ವಿಧಿಸಿಕೊಂಡಿದೆ ಎನ್ನಲಾಗಿದೆ.


Trending videos

Back to Top