CONNECT WITH US  

ವಿಶ್ವದ ಶೇ.90 ಮಂದಿಯಿಂದ ಅಶುದ್ಧ ಗಾಳಿ ಸೇವನೆ: ಆತಂಕ

ಜಿನೇವಾ: ವಿಶ್ವದ ಶೇ.90ರಷ್ಟು ಮಂದಿ ಅಶುದ್ಧ ಗಾಳಿಯನ್ನು ಸೇವಿಸುತ್ತಿದ್ದಾರೆ. ಸರಾಸರಿ 10 ಜನರಲ್ಲಿ 9 ಮಂದಿಗೆ ಶುದ್ಧಗಾಳಿ ಸಿಗುತ್ತಿಲ್ಲ. ಇದರಿಂದಾಗಿ ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಿ ಒಂದು ವರ್ಷದಲ್ಲಿ 60 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವರದಿ ದೃಢಪಡಿಸಿದೆ. ಈ ಕುರಿತು ಅಂಕಿ ಅಂಶ ಬಿಡುಗಡೆ ಮಾಡಿರುವ ಅದು, ನಗರಗಳು ಹೆಚ್ಚು ವಾಯು ಮಾಲಿನ್ಯಕ್ಕೊಳಗಾಗಿವೆ. ಗ್ರಾಮೀಣ ಪ್ರದೇಶಗಳಲ್ಲೂ ಪರಿಸ್ಥಿತಿ ಕೆಟ್ಟದ್ದಾಗಿದೆ. ಅಭಿವೃದ್ಧಿಶೀಲ ದೇಶಗಳಿಗಿಂತ ಬಡ ದೇಶಗಳಲ್ಲಿ ಈ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿಸಿದೆ.

Trending videos

Back to Top