CONNECT WITH US  

ಮಹಿಳೆಯರ ಬಗ್ಗೆ ಟ್ರಂಪ್‌ ಅಸಭ್ಯ ನುಡಿ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡೊನಾಲ್ಡ್‌ ಟ್ರಂಪ್‌ ಅವರು ಮಹಿಳೆಯರ ಬಗ್ಗೆ ತೀರಾ ಅಸಭ್ಯ ಮಾತುಗಳನ್ನು ಆಡಿದ್ದ 11 ವರ್ಷಗಳ ಹಳೆಯ ವಿಡಿಯೋವೊಂದು ಇದೀಗ ಪ್ರತ್ಯಕ್ಷವಾಗಿದೆ. ಇದರಿಂದಾಗಿ ಟ್ರಂಪ್‌ ಅವರಿಗೆ ಬಹುದೊಡ್ಡ ಹಿನ್ನಡೆಯಾಗಿದೆ. ಇದು ಅರಿವಾಗುತ್ತಿದ್ದಂತೆ ಅಪರೂಪಕ್ಕೆಂಬಂತೆ ಟ್ರಂಪ್‌ ಅವರು ಕ್ಷಮೆ ಯಾಚಿಸಿದ್ದಾರೆ.

"ನಾನು ಮಹಿಳೆಯರಿಗೆ ಮುತ್ತು ಕೊಡುತ್ತೇನೆ. ಅದೊಂದು ರೀತಿ ಅಯಸ್ಕಾಂತ ಇದ್ದಂತೆ. ಅದಕ್ಕೆ ನಾನು ಕಾಯುವುದಿಲ್ಲ. ನೀವು ಸ್ಟಾರ್‌ ಆಗಿದ್ದರೆ, ಕಿಸ್‌ ಮಾಡಲು ಮಹಿಳೆಯರೇ ಬಿಡುತ್ತಾರೆ. ಅದರಾಚೆಗೆ ನೀವು ಏನು ಬೇಕಾದರು ಮಾಡಬಹುದು' ಎಂದು 3 ನಿಮಿಷಗಳ ಈ ವಿಡಿಯೋದಲ್ಲಿ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಮಹಿಳೆಯರಿಗೆ ನಾನು ಹೊಡೆಯುತ್ತಿದ್ದೆ. ನಾನು ಶ್ರೀಮಂತ ಹಾಗೂ ಪ್ರಸಿದ್ಧ ವ್ಯಕ್ತಿ ಎಂಬ ಕಾರಣಕ್ಕೆ ಮಹಿಳೆಯರು ಅದಕ್ಕೆಲ್ಲಾ ಅವಕಾಶ ಕೊಡುತ್ತಿದ್ದರು ಎಂದು ಟ್ರಂಪ್‌ ಹೇಳುವ ವಿಡಿಯೋ ವಾಷಿಂಗ್ಟನ್‌ ಪೋಸ್ಟ್‌ಗೆ 
ಲಭ್ಯವಾಗಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಟ್ರಂಪ್‌, "ತಮಾಷೆಗಾಗಿ ಖಾಸಗಿಯಾಗಿ ಮಾತನಾಡುತ್ತಾ ಈ ಮಾತುಗಳನ್ನು ಆಡಿದ್ದೇನೆ. ಆದರೆ ಹಿಲರಿ ಕ್ಲಿಂಟನ್‌ರ ಪತಿ ಬಿಲ್‌ ಕ್ಲಿಂಟನ್‌ ಅವರು ನನಗಿಂತ ಕೆಟ್ಟ ಮಾತುಗಳನ್ನು ಆಡಿದ್ದಾರೆ. ಒಂದು ವೇಳೆ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ' ಎಂದು ತಿಳಿಸಿದ್ದಾರೆ.

ಆದರೆ ಈ ಕ್ಷಮೆಯನ್ನು ಟ್ರಂಪ್‌ ಪಕ್ಷದವರೇ ತಿರಸ್ಕರಿಸಿರುವುದರಿಂದ ಅವರಿಗೆ ಮುಖಭಂಗವಾಗಿದೆ.

Trending videos

Back to Top