CONNECT WITH US  

ಹರ್ಟ್‌, ಸ್ಟಾರ್ಮ್ಗೆ ಅರ್ಥಶಾಸ್ತ್ರ ನೊಬೆಲ್‌

ಸ್ಟಾಕ್‌ಹೋಂ: ಬ್ರಿಟನ್‌-ಅಮೆರಿಕನ್‌ ಶಿಕ್ಷಣ ತಜ್ಞ ಆಲಿವರ್‌ ಹರ್ಟ್‌ ಮತ್ತು ಫಿನ್ಲಂಡ್‌ನ‌ ಬೆಂಗ್‌ ಹೋಮ್‌ಸ್ಟಾರ್ಮ್ ಅವರಿಗೆ ಈ ಸಾಲಿನ ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿ ಸಂದಿದೆ. ಈ ಇಬ್ಬರೂ ಶಿಕ್ಷಣ ತಜ್ಞರು 'ಗುತ್ತಿಗೆ ಸಿದ್ಧಾಂತ' ಎಂಬ ಆರ್ಥಿಕ ಸಿದ್ಧಾಂತದ ಸಂಶೋಧಕರಾಗಿದ್ದಾರೆ. ಈ ಸಿದ್ಧಾಂತದ ಮೂಲಕ ಕಂಪನಿಯ ಉನ್ನತಾಧಿಕಾರಿಗಳಿಗೆ ಸಾಧನೆ ಆಧರಿತ ವೇತನ, ವೇತನ ಕಡಿತ, ಜಂಟಿ ವೇತನ ಹಂಚಿಕೆ, ಸರ್ಕಾರಿ ಸ್ವಾಮ್ಯದ ಕಂಪನಿಗಳ ಖಾಸಗೀಕರಣ - ಇತ್ಯಾದಿಗಳನ್ನು ವ್ಯಾಖ್ಯಾನಿಸಬಹುದಾಗಿದೆ. ಇದಲ್ಲದೆ, ವಿಮಾ ಪಾಲಿಸಿಗಳ ನಿರ್ಧಾರ, ಬಂದೀಖಾನೆ ವೇತನ ನಿರ್ವಹಣೆಗೂ ಇದು ಅನುಕೂಲ ಕಲ್ಪಿಸಿದೆ. ಈ ಇಬ್ಬರಿಗೂ 9,24,000 ಡಾಲರ್‌ ಬಹುಮಾನ ಬರಲಿದೆ.

Trending videos

Back to Top