CONNECT WITH US  

ಪಾಕಿಸ್ಥಾನದ ವಿಮಾನ ಪತನ: 48 ಮಂದಿ ಸಾವು

ಇಸ್ಲಾಮಾಬಾದ್‌: ಪಾಕಿಸ್ಥಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ನ ವಿಮಾನವೊಂದು ಎಬೋಟಾಬಾದ್‌ನ ಗ್ಯಾರಿಸನ್‌ ಪಟ್ಟಣದ ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿದ್ದು, ಗಾಯಕ ಜುನೈದ್‌ ಜಮೆÒಡ್‌ ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 48 ಮಂದಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.

ಎಟಿಆರ್‌ ಪಿ.ಕೆ. 47 ವಿಮಾನ ಖೈಬರ್‌ ಪಖೂ¤ನ್‌ಖ್ವಾದ ಪ್ರಾಂತ್ಯದಿಂದ ಇಸ್ಲಾಮಾಬಾದ್‌ಗೆ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘ‌ಟನೆ ಸಂಭವಿಸಿದ್ದು, ಚಿತ್ರಾಲ್‌ನಿಂದ ಮಧ್ಯಾಹ್ನ 3.30ಕ್ಕೆ ಹೊರಟ ವಿಮಾನ 4.40ಕ್ಕೆ ಇಸ್ಲಾಮಾಬಾದನ್ನು ತಲುಪಬೇಕಾಗಿತ್ತು. ಆದರೆ, ಹವೇಲಿಯನ್‌ ಸಮೀಪ ಪತನಗೊಂಡಿದೆ. ಪತನಕ್ಕೂ ಮುನ್ನ ಅಪಾಯದ ಮುನ್ಸೂಚನೆಯನ್ನು ವಿಮಾನದ ಪೈಲಟ್‌ ಕಳುಹಿಸಿದ್ದ ಎಂದು ಎಂದು ಪಿಐಎ ವಕ್ತಾರರೊಬ್ಬರು ತಿಳಿಸಿದ್ದಾರೆ. ವಿಮಾನ ಪತನಗೊಂಡ ಕೂಡಲೇ ಹೊತ್ತಿ ಉರಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳನ್ನು ಕಳುಹಿಸಿಕೊಡಲಾಗಿದೆ. 

ಈ ಹಿಂದೆ 2012ರಲ್ಲಿ 121 ಮಂದಿ ಇದ್ದ  ವಿಮಾನ  ಪತನಗೊಂಡಿತ್ತು. 2010ರಲ್ಲಿ ಏರ್‌ಬಸ್‌ ವಿಮಾನ ಇಸ್ಲಾಮಾಬಾದ್‌ ಸಮೀಪದ  ಪತನವಾಗಿತ್ತು. ವಿಮಾನದಲ್ಲಿದ್ದ 152 ಮಂದಿ ಸಾವನ್ನಪ್ಪಿದ್ದರು.

Trending videos

Back to Top