CONNECT WITH US  

ಜಗತ್ತಿನ ಉದ್ದನೆಯ ಬುಲೆಟ್‌ ರೈಲು ಮಾರ್ಗ ಚೀನಾದಲ್ಲಿ

ಬೀಜಿಂಗ್‌: ಚೀನಾದಲ್ಲಿರುವ ಜಗತ್ತಿನ ಅತ್ಯಂತ ಉದ್ದನೆಯ ಬುಲೆಟ್‌ ರೈಲು ಮಾರ್ಗ ದಿ ಶಾಂಘೈ-ಕುನಿ¾ಂಗ್‌ ಕಾರ್ಯಾರಂಭಗೊಂಡಿದೆ. 2,252 ಕಿ.ಮೀ. ಉದ್ದವಿರುವ ಈ ಹಳಿಯಲ್ಲಿ ಗಂಟೆಗೆ ಗರಿಷ್ಠ 330 ಕಿ.ಮೀ. ವೇಗದಲ್ಲಿ ಸಾಗಬಹುದು. ಈ ಮೂಲಕ ದೇಶದ ಅತ್ಯಂತ ಮುಂದುವರಿದ ಪೂರ್ವ ಕರಾವಳಿ ಪ್ರದೇಶದಿಂದ ಅಭಿವೃದ್ಧಿಶೀಲ ನೈಋತ್ಯ ಭಾಗ ಸಂಪರ್ಕಿಸುವ ಮಾರ್ಗದ 34 ಗಂಟೆಗಳ ಪ್ರಯಾಣ ಅವಧಿಯು 11 ಗಂಟೆಗಳಿಗೆ ಇಳಿಯಲಿದೆ ಎಂದು ಚೀನಾ ರೈಲ್ವೆ ಮಂಡಳಿ ಹೇಳಿದೆ.

ದಿ ಶಾಂಘೈ-ಕುನಿ¾ಂಗ್‌ ಬುಲೆಟ್‌ ರೈಲು ದೇಶದ ಐದು ಪ್ರಾಂತಗಳಾದ ಝೇಜಿಯಾಂಗ್‌, ಜಿಯಾಂಗ್‌ಗ್ಸಿ, ಹುನಾನ್‌, ಝ್ಯುಝೋಯು ಹಾಗೂ ಯುನ್ನನ್‌ಗಳನ್ನು ಸಂಪರ್ಕಿಸುತ್ತದೆ. ಈ ಮೂಲಕ ದೇಶದ ಬಹುತೇಕ ಎಲ್ಲ ಪ್ರಾಂತ್ಯಗಳಲ್ಲೂ ಬುಲೆಟ್‌ ರೈಲು ಸಂಪರ್ಕ ವ್ಯವಸ್ಥೆ ನಿರ್ಮಾಣವಾದಂತಾಗಿದೆ.

ಚೀನಾ ಇದುವರೆಗೆ 20,000 ಕಿ.ಮೀ. ಕ್ಕಿಂತ ಹೆಚ್ಚು ಉದ್ದದ ಅತಿ ವೇಗದ ರೈಲು ಹಳಿಗಳನ್ನು ನಿರ್ಮಿಸಿದೆ. ಇದನ್ನು 2030ರ ವೇಳೆಗೆ 45,000 ಕಿ.ಮೀ. ಗೆ ಹೆಚ್ಚಿಸುವ ಉದ್ದೇಶವನ್ನೂ ಹೊಂದಿದೆ. ಅಲ್ಲದೆ, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ತನ್ನ ಬುಲೆಟ್‌ ರೈಡಡಿಡಿಲು ತಂತ್ರಜ್ಞಾನಕ್ಕೆ ಮಾರುಕಟ್ಟೆಯನ್ನೂ ಹುಡುಕುತ್ತಿದೆ.


Trending videos

Back to Top