CONNECT WITH US  

ಪಾಕ್‌, ಇರಾಕ್‌ ಸ್ಫೋಟಕ್ಕೆ 117 ಮಂದಿ ಸಾವು

ಬಾಗ್ಧಾದ್‌/ಕರಾಚಿ: ಪಾಕಿಸ್ತಾನ ಮತ್ತು ಇರಾಕ್‌ನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಬಾಂಬ್‌ ಸ್ಫೋಟಗಳಲ್ಲಿ 117 ಮಂದಿ ಅಸುನೀಗಿದ್ದಾರೆ. 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಶೇವಾನ್‌ ಪಟ್ಟಣದಲ್ಲಿರುವ ಪ್ರಾರ್ಥನಾ ಕೇಂದ್ರವೊಂದರಲ್ಲಿನ ಕಾರ್ಯಧಿ ಕ್ರಮದಲ್ಲಿ ನೂರಾರು ಮಂದಿ ಭಾಗಿಯಾಗಿದ್ದ ವೇಳೆ ಆತ್ಮಹತ್ಯಾ ಬಾಂಬರ್‌ ಒಬ್ಬ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ. ಇದರಿಂದಾಗಿ ಕನಿಷ್ಠ 72 ಮಂದಿ ಅಸುನೀಗಿ, 100ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. 

ಮತ್ತೂಂದೆಡೆ ಇರಾಕ್‌ ರಾಜಧಾನಿ ಬಾಗ್ಧಾದ್‌ನ ದಕ್ಷಿಣ ಭಾಗದ ಮಾರುಕಟ್ಟೆಯಲ್ಲಿ ಕಾರ್‌ ಬಾಂಬ್‌ ಸ್ಫೋಟದಿಂದ ಕನಿಷ್ಠ 45 ಮಂದಿ ಅಸುನೀಗಿದ್ದಾರೆ. ಉಗ್ರ ಸಂಘಟನೆ ಐಎಸ್‌ ಈ ಸ್ಫೋಟಗಳ ಹೊಣೆ ಹೊತ್ತುಕೊಂಡಿದೆ.

Trending videos

Back to Top