CONNECT WITH US  

ಮೆಲ್ಬೋರ್ನ್:ಶಾಪಿಂಗ್‌ ಮಾಲ್‌ ಮೇಲೆ ವಿಮಾನ ಪತನ;ಐವರು ಬಲಿ 

ಮೆಲ್ಬೋರ್ನ್ : ಆಸ್ಟ್ರೇಲಿಯಾದಲ್ಲಿ  ಸೋಮವಾರ ಭೀಕರ ವಿಮಾನ ದುರಂತವೊಂದು ಸಂಭವಿಸಿದ್ದು , ಶಾಪಿಂಗ್‌ ಮಾಲ್‌ವೊಂದರ ಮೇಲೆ ವಿಮಾನ ಪತನಗೊಂಡ ಪರಿಣಾಮ ವಿಮಾನದಲ್ಲಿದ್ದ ಪೈಲಟ್‌ ಸೇರಿ ಐವರು ಪ್ರಯಾಣಿಕರು ದಾರುಣವಾಗಿ ಸಜೀವ ದಹನಗೊಂಡಿದ್ದಾರೆ. 

ಬೀ ಕ್ರಾಫ್ಟ್ ಬಿ 200 ವಿಮಾನದಲ್ಲಿದ್ದ  ಅಮೆರಿಕದ ನಾಲ್ವರು ಪ್ರವಾಸಿಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ವಿಮಾನ ಹಾರಾಟ ನಡೆಸಿದ ಕೆಲ ಕ್ಷಣಗಳಲ್ಲೇ ತಾಂತ್ರಿಕ ದೋಷದಿಂದಾಗಿ ಪತನಗೊಂಡಿದೆ ಎಂದು ವರದಿಯಾಗಿದೆ. 

ವಿಮಾನ ಪತನಗೊಂಡ ಬಳಿಕ ಭಾರೀ ಬೆಂಕಿ ಕಾಣಿಸಿಕೊಂಡಿದ್ದು ಮಾಲ್‌ಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ. 


Trending videos

Back to Top