ಬ್ರಿಟನ್ ಅವರಣದಲ್ಲಿ ಶೂಟೌಟ್ : ಇಬ್ಬರ ಸಾವು,12 ಮಂದಿಗೆ ಗಾಯ
Team Udayavani, Mar 22, 2017, 11:13 PM IST
ಲಂಡನ್: ಬ್ರಿಟನ್ ಸಂಸತ್ ಭವನದ ಬಳಿ ಉಗ್ರರ ದಾಳಿ ಯತ್ನ ನಡೆದಿದೆ ಈ ಘಟನೆಯಲ್ಲಿ ಮಹಿಳೆ ಸೇರಿ ಇಬ್ಬರು ಸಾವನ್ನಪಿದ್ದು 12 ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಅಸ್ಪತ್ರೆ ದಾಖಲಿಸಿದ್ದಾರೆ.
ದಾಳಿ ಯತ್ನವನ್ನು ಪೊಲೀಸರು ತಡೆದಿದ್ದು, ದಾಳಿಕೋರನ ಮೇಲೆ ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ಸುಮಾರು 400 ಮಂದಿ ಸಂಸದರು ಸಂಸತ್ ಭವನದ ಒಳಗಿದ್ದರು ಅವರು ಸುರಕ್ಷಿತರಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸಂಸತ್ತು ಪ್ಯಾಲೇಸ್ ಆಫ್ ವೆಸ್ಟ್ ಮಿನಿಸ್ಟರ್ ಹೊರಗಿನ ಸೇತುವೆಯಲ್ಲಿ ವ್ಯಕ್ತಿಯೊಬ್ಬ ಕಾರನ್ನು ಹಿಗ್ಗಾಮುಗ್ಗಾ ಚಲಾಯಿಸಿದ್ದು, ಪಾದಚಾರಿಗಳಿಗೆ ಮೇಲೆ ಏರಿ ಹೋಗಿದ್ದಾನೆ. ಬಳಿಕ ಅಲ್ಲಿನ ಗೇಟೊಂದಕ್ಕೆ ಗುದ್ದಿಸಿದ್ದು ಅಲ್ಲೇ ಇದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ಚೂರಿಯಿಂದ ಇರಿದಿದ್ದಾನೆ. ಬಳಿಕ ಸಂಸತ್ ಗೇಟಿನೊಳಕ್ಕೆ ನುಗ್ಗಲು ಯತ್ನಿಸುತ್ತಿದ್ದಂತೆ ಶಸ್ತ್ರಸಜ್ಜಿತ ಪೊಲೀಸರು ದಾಳಿಕೋರನ ಮೇಲೆ ಗುಂಡು ಹಾರಿಸಿದ್ದಾರೆ. ಸಂಸತ್ತಿನ ಹೊರಭಾಗ ಮೂರು ಗುಂಡಿನ ದಾಳಿ ಸದ್ದು ಕೇಳುತ್ತಿದ್ದಂತೆ, ಲಂಡನ್ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ