ಕಿರಿದಾಗುತ್ತಿದೆ ಓಜೋನ್ ರಂಧ್ರ
Team Udayavani, Apr 8, 2017, 6:47 AM IST
ವಾಷಿಂಗ್ಟನ್: ಓಜೋನ್ ಪದರದಲ್ಲಿನ ರಂಧ್ರ ಚಿಕ್ಕದಾಗುತ್ತಿದೆ! ಇಂಥದೊಂದು ಸಿಹಿ ಸುದ್ದಿಯನ್ನು ಅಂತಾರಾಷ್ಟ್ರೀಯ ನಿಯತಕಾಲಿಕೆ “ಸೈನ್ಸ್’ ವರದಿ ಮಾಡಿದೆ. ರಂಧ್ರ ಕಿರಿದಾಗಿರುವುದನ್ನು ದೃಢಪಡಿಸುವಂತಹ ಬಲವಾದ ಸಾಕ್ಷ್ಯ ದೊರೆತಿರುವುದಾಗಿ ಪತ್ರಿಕೆ ತಿಳಿಸಿದೆ.
ಕ್ಲೋರೋಫ್ಲೋರೋ ಕಾರ್ಬನ್ನ (ಸಿಎಫ್ಸಿ) ದುಷ್ಪರಿಣಾಮದಿಂದ ಓಜೋನ್ ಪದರದಲ್ಲಿ ರಂಧ್ರಗಳಾಗುತ್ತಿವೆ ಎಂದು ದಶಕಗಳ ಹಿಂದೆಯೇ ತಿಳಿದುಬಂದಿತ್ತು. ಅನಂತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅತಿಯಾ ಗಿದ್ದ ಸಿಎಫ್ಸಿ ರೀತಿಯ ಪರಿಸರ ಹಾಗೂ ಓಜೋನ್ ಪದರಕ್ಕೆ ಹಾನಿಮಾಡುವ ರಾಸಾಯನಿಕಗಳ ಬಳಕೆಯನ್ನು 1987ರಲ್ಲಿ ನಿಷೇಧಿಸಲಾಗಿತ್ತು. ಪರಿಣಾಮ 2000ದಿಂದ ಈಚೆಗೆ ಓಜೋನ್ ಪದರದ ರಂಧ್ರ 1.5 ದಶಲಕ್ಷ ಚದರ ಮೈಲಿಯಷ್ಟು ಚಿಕ್ಕದಾಗಿದೆ. 21ನೇ ಶತಮಾನದ ಮಧ್ಯ ಭಾಗದ ವೇಳೆಗೆ ರಂಧ್ರ ಸಂಪೂರ್ಣ ಮುಚ್ಚಿಕೊಳ್ಳಲಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ರಂಧ್ರದ ಸ್ಥಿತಿ ಹಾಗೂ ವಾತಾವರಣದಲ್ಲಿ ಸಿಎಫ್ಸಿ ಪ್ರಮಾಣ ತಿಳಿಯುವ ಉದ್ದೇಶದಿಂದ ಅಂಟಾರ್ಟಿಕಾದಲ್ಲಿ ಬಿಡಲಾಗಿದ್ದ ವೆದರ್ ಬಲೂನ್ಗಳು ಹಾಗೂ ಉಪಗ್ರಹಗಳಿಂದ, ಎಂಐಟಿಯ ಸುಸಾನ್ ಸೋಲೊಮೊನ್ ನೇತೃತ್ವದ ಸಂಶೋಧಕರ ತಂಡ ಮಾಹಿತಿ ಸಂಗ್ರಹಿಸಿದೆ. ಅದರಂತೆ, ಸಿಎಫ್ಸಿ ಪ್ರಮಾಣ ನಿಯಂತ್ರಣಕ್ಕೆ ಬಂದಿದ್ದು, ರಂಧ್ರಗಳು ಗಣನೀಯವಾಗಿ ಕ್ಷೀಣಿಸುತ್ತಿವೆ. ಓಜೋನ್ ಪದರ 1980ರ ಹಿಂದಿನ ಸುಸ್ಥಿತಿಗೆ ಮರಳುತ್ತಿರುವ ಬಗ್ಗೆ ಸಂಶೋಧಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಸೂರ್ಯನ ಅತಿನೇರಳೆ ಕಿರಣಗಳು ನೇರ ವಾಗಿ ಭೂಮಿಗೆ ಬರುವುದರಿಂದ ನಮ್ಮ ಕಣ್ಣು ಮತ್ತು ಚರ್ಮಕ್ಕೆ ಹಾನಿಯುಂಟುಮಾಡುತ್ತವೆ. ಇಂತಹ ಅಪಾಯಕಾರಿ ಕಿರಣಗಳನ್ನು ತಡೆಯುವ ಮೂಲಕ ಮನುಕುಲವನ್ನು ರಕ್ಷಿಸುತ್ತಿರುವ ಓಜೋನ್ ಪದರದಲ್ಲಿ ಅಮೆರಿಕದ ಭೂ ವಿಸ್ತೀರ್ಣದಷ್ಟು ದೊಡ್ಡ ರಂಧ್ರ ಸೃಷ್ಟಿಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ
ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್ನಲ್ಲಿ ಪೋಸ್ಟ್, ಲೈಕ್ ರಿಪ್ಲೈ ಗೆ ಅವಕಾಶ
Iran ವಿರುದ್ಧ ಪ್ರತೀಕಾರ ಬೇಡ: ಇಸ್ರೇಲ್ ಮೇಲೆ ಹಲವು ರಾಷ್ಟ್ರಗಳ ಒತ್ತಡ