CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಇಬ್ಬರು ಬಾಂಗ್ಲಾದೇಶೀ ಯುದ್ಧಾಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ

ಢಾಕಾ: 1971ರಲ್ಲಿ ಪಾಕಿಸ್ಥಾನದ ವಿರುದ್ಧದ ವಿಮೋಚನಾ ಸಮರದಲ್ಲಿ ಮಾನವತೆಯ ವಿರುದ್ಧ ಮಹಾ ಕ್ರೌರ್ಯ ಮೆರೆದಿದ್ದ ಬಾಂಗ್ಲಾದೇಶದ ಇಬ್ಬರು ಯುದ್ಧಾಪರಾಧಿಗಳಿಗೆ ವಿಶೇಷ ನ್ಯಾಯಮಂಡಳಿಯು ಗಲ್ಲು ಶಿಕ್ಷೆಯನ್ನು ನೀಡಿದೆ. 

ಗಲ್ಲು ಶಿಕ್ಷೆ ವಿಧಿಸಲ್ಪಟ್ಟವರೆಂದರೆ ಮೊಸ್ಲೆಂ ಪ್ರಧಾನ್‌ ಮತ್ತು ಸೈಯದ್‌ ಮೊಹಮ್ಮದ್‌. ಇವರಲ್ಲಿ ಸೈಯದ್‌ ಮೊಹಮ್ಮದ್‌ ಈಗಲೂ ತಲೆಮರೆಸಿಕೊಂಡಿದ್ದಾನೆ. 

ಈ ಇಬ್ಬರು ಬಾಂಗ್ಲಾದೇಶೀಯರಿಗೆ ಮೂರು ಸದಸ್ಯರ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು, "ಜನಾಂಗೀಯ ಹತ್ಯೆ, ಅತ್ಯಾಚಾರ ಮತ್ತು ಕಗ್ಗೊಲೆ'ಯಂತಹ ಹೀನ ಮತ್ತು ಘೋರ ಅಪರಾಧಗಳಿಗಾಗಿ ಮರಣ ದಂಡನೆಯ ಶಿಕ್ಷೆ ವಿಧಿಸಿದ್ದಾರೆ. 

ಜಸ್ಟಿಸ್‌ ಅನ್ವರುಲ್‌ ಹಕ್‌ ನೇತೃತ್ವದ ನ್ಯಾಯ ಮಂಡಳಿಯು ಮರಣ ದಂಡನೆ ನೀಡಿದ್ದು ಗಲ್ಲಿಗೇರಿಸುವ ಮೂಲಕ ಇಲ್ಲವೇ ಗುಂಡಿಟ್ಟು ಕೊಲ್ಲುವ ಮೂಲಕ, ಸರಕಾರ ನಿರ್ಧರಿಸುವ ರೀತಿಯಲ್ಲಿ,  ಶಿಕ್ಷೆಯನ್ನು ಜಾರಿಗೊಳಿಸುವಂತೆ ಆದೇಶಿಸಿದೆ. 

Back to Top