CONNECT WITH US  

ಪಾಕ್‌ ಪೊಲೀಸರಿಂದ ಪ್ರವಾಸಿ ದಾಖಲೆಗಳಿಲ್ಲದ ಭಾರತೀಯನ ಬಂಧನ

 ಇಸ್ಲಮಬಾದ್‌: ಸರಿಯಾದ ಪ್ರಯಾಣ ದಾಖಲೆಗಳು ಇಲ್ಲದ ಕಾರಣ ಭಾರತೀಯನೊಬ್ಬನನ್ನು ಪಾಕ್‌ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಭಾನುವಾರ ನಡೆದಿದೆ. 

ಸಾಮ್ನಾ ಟಿವಿಯಲ್ಲಿ ವರದಿಯಾದಂತೆ ಸರಿಯಾದ ಪ್ರಯಾಣ ದಾಖಲೆ ಇಲ್ಲದ ಕಾರಣ ವ್ಯಕ್ತಿಯನ್ನು ವಿದೇಶಿ ಕಾಯಿದೆಯಡಿ ವಶಕ್ಕೆ ಪಡೆದಿದ್ದಾರೆ. ಇದು ವರೆಗೆ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ. 

ಬಂಧಿತ ವ್ಯಕ್ತಿಗೆ ನ್ಯಾಯಾಂಗ ಬಂಧನ ವಿಧಿಸಿರುವ ಬಗ್ಗೆ ತಿಳಿದು ಬಂದಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.


Trending videos

Back to Top