CONNECT WITH US  

ಒತ್ತಾಯದ ಮತಾಂತರದಿಂದ ಪಾಕ್‌ನ ಹಿಂದೂಗಳನ್ನು ರಕ್ಷಿಸಿ

ಇಸ್ಲಾಮಾಬಾದ್‌: ಒತ್ತಾಯಪೂರ್ವಕ ಮತಾಂ ತರದಿಂದ ತತ್ತರಿಸಿರುವ ಪಾಕಿಸ್ಥಾನದ ಹಿಂದೂಗಳ ರಕ್ಷಣೆಗೆ ಮುಂದಾಗುವಂತೆ ಅಲ್ಲಿನ ಪ್ರಮುಖ ದಿನಪತ್ರಿಕೆ "ಡಾನ್‌' ಪಾಕ್‌ ಸರಕಾರವನ್ನು ಕೋರಿದೆ.

"ದೇಶದಲ್ಲಿ ಹಿಂದೂ ಹಾಗೂ ಮುಸ್ಲಿಮರು ಒಟ್ಟಾಗಿ ನೆಲೆಸಿರುವಲ್ಲಿ ಶಾಂತಿ, ಸುವ್ಯವಸ್ಥೆ ಇದೆ. ಆದರೆ ಇತ್ತೀಚೆಗೆ ಹಿಂದೂಗಳನ್ನು ಒತ್ತಾಯಪೂರ್ವಕವಾಗಿ ಇಸ್ಲಾಂಗೆ ಮತಾಂತರಿಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇದರಿಂದ ಎರಡೂ ಸಮುದಾಯಗಳ ನಡುವಿನ ಸೌಹಾರ್ದಕ್ಕೆ ಧಕ್ಕೆ ಬಂದಿದೆ' ಎಂದು ಡಾನ್‌ ಸಂಪಾದಕೀಯದಲ್ಲಿ ಹೇಳಿದೆ. ಮತಾಂತರಿಸುವ ಕುರಿತು ತನಿಖಾ ವರದಿ ಪ್ರಕಟಿಸಿರುವ ಡಾನ್‌, "ದೇಶದ ಮುಲ್ಲಾಗಳು ಇಂಥ ಅಕ್ರಮ ಮತಾಂತರ ದಲ್ಲಿ ತೊಡಗಿದ್ದು, ಥಾರ್‌ ಪ್ರಾಂತ್ಯದ ಆರ್ಥಿಕವಾಗಿ ಹಿಂದುಳಿದವರೇ ಇವರ ಗುರಿ. ಇನ್ನೊಂದೆಡೆ ಹಿಂದೂ ಬಾಲಕಿಯರು, ಯುವತಿಯರನ್ನು ಮತಾಂತರಿಸಿ, ನಿರಂತರ ವಾಗಿ ನಡೆಯುತ್ತಿರುವ ಅಪಹರಣ, ಅತ್ಯಾಚಾರವನ್ನು ಕಾನೂನುಬದ್ಧಗೊಳಿಸುವ ಯತ್ನ ನಡೆಯುತ್ತಿದೆ ಎಂದಿದೆ.

Trending videos

Back to Top