“ಡಾರ್ಲಿಂಗ್’ ಎಂದಿದ್ದಕ್ಕೆ ಹಫೀಜ್ನಿಂದ ಮಾನನಷ್ಟ ಕೇಸ್
Team Udayavani, Oct 1, 2017, 7:15 AM IST
ಲಾಹೋರ್: ತನ್ನನ್ನು “ಅಮೆರಿಕದ ಡಾರ್ಲಿಂಗ್’ ಎಂದು ಕರೆದ ಪಾಕಿಸ್ಥಾನದ ವಿದೇಶಾಂಗ ಸಚಿವ ಖ್ವಾಜಾ ಆಸಿಫ್ ಅವರ ವಿರುದ್ಧ ಮುಂಬಯಿ ದಾಳಿ ರೂವಾರಿ ಹಫೀಜ್ ಸಯೀದ್ ಬರೋಬ್ಬರಿ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾನೆ.
ನ್ಯೂಯಾರ್ಕ್ನಲ್ಲಿ ಕಳೆದ ಮಂಗಳವಾರ ನಡೆದ ಏಷ್ಯಾ ಸೊಸೈಟಿ ಫೋರಂನ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡುವ ವೇಳೆ, ಹಕ್ಕಾನಿ, ಲಷ್ಕರ್ ವಿರುದ್ಧ ಸಚಿವ ಆಸಿಫ್ ಕಿಡಿಕಾರಿದ್ದರು. ಅಷ್ಟೇ ಅಲ್ಲ, ಲಷ್ಕರ್ ಸಂಘಟನೆ ಬೆಂಬಲಿಸಿಕೊಂಡು ಬಂದ ಜಮಾತ್ ಉದ್ -ದಾವಾ ಮುಖ್ಯಸ್ಥ ಹಫೀಜ್ ಸಯೀದ್ “ನಿಮ್ಮ ಪ್ರೀತಿ ಪಾತ್ರರಾಗಿದ್ದು’, ಈಗ ಅವರನ್ನು ತಿರಸ್ಕರಿಸುತ್ತಿದ್ದೀರಿ ಎಂದು ಅಮೆರಿಕವನ್ನು ಉದ್ದೇಶಿಸಿ ಹೇಳಿದ್ದರು.
ಪಕ್ಷ ನೋಂದಣಿಗೆ ವಿರೋಧ: ಇದೇ ವೇಳೆ, ಉಗ್ರ ಹಫೀಜ್ನ ರಾಜಕೀಯ ಪಕ್ಷವನ್ನು ನೋಂದಣಿ ಮಾಡಿಕೊಳ್ಳದಂತೆ ಚುನಾವಣಾ ಆಯೋಗವನ್ನು ಪಾಕ್ ಸರಕಾರ ಒತ್ತಾಯಿಸಿದೆ.
ಅಲ್ಕಾಯಿದಾ ಸದಸ್ಯ ದೋಷಿ: ಪಾಕಿಸ್ಥಾನದಲ್ಲಿ ತರಬೇತಿ ಪಡೆದು, ಅಫ್ಘಾನಿಸ್ಥಾನ, ಅಮೆರಿಕದ ಸೇನಾನೆಲೆ ಸಹಿತ ಹಲವಾರು ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಅಮೆರಿಕದ ಅಲ್ಕಾಯಿದಾ ಉಗ್ರ ಸಂಘಟನೆಯ ಸದಸ್ಯ ಮಹಮ್ಮದ್ ಅಲ್ ಫರೇಕ್ನನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ