ಉಳಿದಿರುವುದು ಒಂದೇ ದಾರಿ: ಟ್ರಂಪ್
Team Udayavani, Oct 9, 2017, 6:25 AM IST
ವಾಷಿಂಗ್ಟನ್: ಉತ್ತರ ಕೊರಿಯಾದೊಂದಿಗೆ ರಾಜತಾಂತ್ರಿಕ ಮಾತುಕತೆಗಳೆಲ್ಲ ವಿಫಲವಾಗಿದ್ದು, ಇನ್ನುಳಿದಿರುವುದು ಒಂದೇ ದಾರಿ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.
ಈ ಮೂಲಕ ಉ.ಕೊರಿಯಾ ವಿರುದ್ಧ ಸಮರ ಸಾರುವ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಆ ದೇಶದೊಂದಿಗೆ 25 ವರ್ಷಗಳಿಂದ ಮಾತುಕತೆ ನಡೆಯುತ್ತಿದೆ. ಭಾರೀ ಹಣಕಾಸನ್ನೂ ನೀಡಲಾಗಿದೆ. ಅದೆಲ್ಲವೂ ವಿಫಲವಾಗಿದ್ದು, ಈಗ ಇರುವ ದಾರಿ ಒಂದೇ ಎಂದು ಟ್ರಂಪ್ ಟ್ವೀಟಿಸಿದ್ದಾರೆ.