CONNECT WITH US  

ರಾಜನ್‌ ಕೈತಪ್ಪಿದ ಅರ್ಥ ನೊಬೆಲ್‌ ಥೇಲರ್‌ಗೆ

ಸ್ಟಾಕ್‌ಹೋಂ: ಪ್ರಸಕ್ತ ವರ್ಷದ ಅರ್ಥಶಾಸ್ತ್ರ ನೊಬೆಲ್‌ ಆರ್‌ಬಿಐ ಮಾಜಿ ಗವರ್ನರ್‌ ರಘುರಾಂ ರಾಜನ್‌ ಅವರ ಕೈತಪ್ಪಿದೆ. ಅಮೆರಿಕದ ಅರ್ಥತಜ್ಞ ರಿಚರ್ಡ್‌ ಥೇಲರ್‌ ಅವರು ಈ ಪ್ರತಿಷ್ಠಿತ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಅರ್ಥಶಾಸ್ತ್ರ ಹಾಗೂ ಮನಶಾÏಸ್ತ್ರದ ನಡುವಿನ ಅಂತರವನ್ನು ಇಲ್ಲವಾಗಿ ಸುವ ಮೂಲಕ, "ವರ್ತನಾ ಅರ್ಥ ಶಾಸ್ತ್ರ'(ಬಿಹೇವಿಯರಲ್‌ ಎಕ ನಾಮಿಕ್ಸ್‌)ಕ್ಕೆ ಸಂಬಂಧಿಸಿ ನೀಡಿದ ಗಣನೀಯ ಕೊಡುಗೆಗಾಗಿ ಅವರಿಗೆ ಈ ಗೌರವ ನೀಡಲಾಗಿದೆ.

ಹಣಕಾಸು ಮಾರುಕಟ್ಟೆ ಮತ್ತು ಆರ್ಥಿಕತೆಗೆ ಸಂಬಂಧಿಸಿ ನಿರ್ಧಾರ ಕೈಗೊಳ್ಳುವಾಗ ಒಬ್ಬ ವ್ಯಕ್ತಿಯ ಮಾನಸಿಕ ಹಾಗೂ ಸಾಮಾಜಿಕ ಅಂಶಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಕುರಿತು ಅವರು ಸಂಶೋಧನೆ ನಡೆಸಿದ್ದಾರೆ. ರಿಚರ್ಡ್‌ ಅವರು ಆರ್ಥಿಕತೆಯನ್ನು ಇನ್ನಷ್ಟು ಮಾನವೀಯ ಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ನೊಬೆಲ್‌ ಸಮಿತಿ ತಿಳಿಸಿದೆ. ಥೇಲರ್‌ ಅವರು ಪ್ರಸ್ತುತ ಷಿಕಾಗೋ ವಿವಿಯಲ್ಲಿ ಪ್ರೊಫೆಸರ್‌ ಆಗಿ ಕಾರ್ಯನಿರ್ವ ಹಿಸುತ್ತಿದ್ದಾರೆ. ಅರ್ಥಶಾಸ್ತ್ರ ನೊಬೆಲ್‌ ಸಂಭಾವ್ಯರ ಪಟ್ಟಿಯಲ್ಲಿ ರಘುರಾಂ ರಾಜನ್‌ರ ಹೆಸರೂ ಇತ್ತು ಎಂದು 2 ದಿನಗಳ ಹಿಂದಷ್ಟೇ ದಿ ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿತ್ತು. ಸಮಿತಿ ಆಯ್ಕೆ ಮಾಡಿರುವ 6 ಅರ್ಥಶಾಸ್ತ್ರಜ್ಞರ ಪಟ್ಟಿಯಲ್ಲಿ ರಾಜನ್‌ ಹೆಸರೂ ಇದೆ ಎಂದು ಹೇಳಲಾಗಿತ್ತು.

Trending videos

Back to Top