ಸೌಂದರ್ಯ ರಾಣಿಯನ್ನು ಕೊಂದ 60 ವರ್ಷ ಬಳಿಕ ಪಾದ್ರಿಗೆ ಜೀವಾವಧಿ

Team Udayavani, Dec 9, 2017, 11:57 AM IST

Texas-Confession-700.jpg

ಸ್ಯಾನ್‌ ಅಂಟಾನಿಯೋ : 60 ವರ್ಷಗಳ ಹಿಂದೆ ತನ್ನ ಬಳಿ ಪಾಪ ನಿವೇದನೆಗಾಗಿ ಬಂದಿದ್ದ ಓರ್ವ ಮಾಜಿ ಸೌಂದರ್ಯ ರಾಣಿ ಯನ್ನು ಕೊಲೆಗೈದ ಅಪರಾಧಕ್ಕಾಗಿ 87ರ ಹರೆಯದ ನಿವೃತ್ತ ಕ್ಯಾಥೋಲಿಕ್‌ ಪ್ರೀಸ್ಟ್‌ ಗೆ ದಕ್ಷಿಣ ಟೆಕ್ಸಾಸ್‌ನ ನ್ಯಾಯಾಧೀಶರು ಜೀವಾವಧಿ ಜೈಲು ಶಿಕ್ಷೆ ವಿಧಿಸಿದ್ದಾರೆ.

ಪಾದ್ರಿ ಜಾನ್‌ ಫೀಟ್‌ ಅವರು ಈ ಕೊಲೆ ನಡೆಸಿದ್ದಾಗ 27ರ ಹರೆಯದ ತರುಣರಾಗಿದ್ದರು. ಕೊಲೆಗೀಡಾಗಿದ್ದ ಸೌಂದರ್ಯ ರಾಣಿ ಐರೀನ್‌ ಗಾರ್ಜಾ 25ರ ಹರೆಯದವಳಾಗಿದ್ದಳು. 1960ರ ಆ ದಿನಗಳಲ್ಲಿ  ಪಾದ್ರಿ ಜಾನ್‌ ಫೀಟ್‌,  ಟೆಕ್ಸಾಸ್‌ನ ಮೆಕಾಲೆನ್‌ ನಲ್ಲಿ ಸಂದರ್ಶಕ ಪಾದ್ರಿಯಾಗಿದ್ದರು. ಪವಿತ್ರ ಸಪ್ತಾಹದ ಒಂದು ದಿನ ಐರೀನ್‌ ಗಾರ್ಜಾ ಪಾಪ ನಿವೇದನೆಗಾಗಿ ಚರ್ಚಿಗೆ ಬಂದಿದ್ದಳು. ಆಗ ಪಾದ್ರಿ ಜಾನ್‌ ಫೀಟ್‌ ಅವರು ಪಾಪ ನಿವೇದನ ಕಾರ್ಯಕ್ರಮವನ್ನು ನಡೆಸಿಕೊಡತ್ತಿದ್ದರು. ಆಗಲೇ ಗಾರ್ಜಾಳೊಂದಿಗೆ ಸಂಪರ್ಕ ಬೆಳೆಸಿಕೊಂಡ ಪಾದ್ರಿ ಫೀಟ್‌ ಆಕೆಯನ್ನು ಕೊಂದು ಮುಗಿಸಿದರು. 

ಈ ಕೊಲೆ ಕೃತ್ಯ ನಡೆದ 60 ವರ್ಷಗಳ ತರುವಾಯ ಅಪರಾಧ ಸಾಬೀತಾಗಿ ಆರೋಪಿ ಪಾದ್ರಿಯು ದೋಷಿ ಎಂದು ನಿರ್ಧಾರವಾದದ್ದು ಮೊನ್ನೆ ಗುರುವಾರ. ಅಂದು ಟೆಕ್ಸಾಸ್‌ ನ್ಯಾಯಾಲಯ, ಈಗ 87ರ ಹರೆಯದವರಾಗಿರುವ ಆರೋಪಿ ಪಾದ್ರಿ ಜಾನ್‌ ಫೀಟ್‌ ಅವರನ್ನು ಕೊಲೆ ಅಪರಾಧಿ ಎಂದು ಘೋಷಿಸಿತ್ತು. ನಿನ್ನೆ ಶುಕ್ರವಾರ ಅವರಿಗೆ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆಯನ್ನು ಪ್ರಕಟಿಸಿತು.

ಪಾದ್ರಿ ಹುದ್ದೆಯಿಂದ ನಿವೃತ್ತರಾದ ಬಳಿಕ ಫೀಟ್‌ ಅವರು ಅರಿಜೋನಾದಲ್ಲಿನ ವಿಶ್ರಾಂತಿ ಗೃಹದಲ್ಲಿ ವಾಸಿಸಿಕೊಂಡಿದ್ದರು. ಅವರ ವಿರುದ್ಧ ದೋಷಾರೋಪ ದಾಖಲಾದೊಡನೆಯೇ ಅವರನ್ನು ಟೆಕ್ಸಾಸ್‌ಗೆ ಗಡೀಪಾರು ಮಾಡಿಸಿಕೊಳ್ಳಲಾಯಿತು. 

ಗಾರ್ಜಾಳನ್ನು ತಾನು ಕೊಂದದ್ದು ಹೌದೆಂದು ಪಾದ್ರಿ ಫೀಟ್‌ ನನ್ನಲ್ಲಿ ತಪ್ಪೊಪ್ಪಿಕೊಂಡಿದ್ದರು ಎಂದು ಮಿಸೋರಿ ಮೊನಾಸ್ಟರಿಯಿಂದ ಸಾಕ್ಷ್ಯ ನುಡಿಯಲು ಬಂದಿದ್ದ ನಿವೃತ್ತ  ಟ್ರ್ಯಾಪಿಸ್ಟ್‌ ಸನ್ಯಾಸಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿದ್ದರು. 

ಪಾದ್ರಿ ಫೀಟ್‌ ಅವರು ಗಾರ್ಜಾಳ ಕೊಲೆ ಮಾಡಿದ್ದ ಸಂದರ್ಭದಲ್ಲಿ ಟೆಕ್ಸಾಸ್‌ನ ಕ್ರೈಸ್ತ ಸಮುದಾಯ ತುಂಬಾ ವಿಚಲಿತವಾಗಿತ್ತು. ಆಗ ಜಾನ್‌ ಎಫ್ ಕೆನಡಿ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಲ್ಲಿದ್ದರು. ಕೆನಡಿ ಅವರು ಕ್ರೈಸ್ತ ಮತಸ್ಥರಾಗಿರುವುದರಿಂದ ಅವರಿಗೆ ಕ್ರೈಸ್ತ ಪಾದ್ರಿ ಫೀಟ್‌ ನಡೆಸಿದ ಗಾರ್ಜಾ ಕೊಲೆಯ ಕಳಂಕ ತಟ್ಟದಿರಲೆಂಬ ಕಾರಣಕ್ಕೆ ಗಾರ್ಜಾಳ ಕೊಲೆಯನ್ನು ಮುಚ್ಚಿ ಹಾಕುವ ಹುನ್ನಾರವೂ ನಡೆದಿತು. 

ಈಗ 60 ವರ್ಷಗಳ ತರುವಾಯ ಕೊಲೆಗಾರ ಪಾದ್ರಿ ಫೀಟ್‌ನ ಅಪರಾಧ ಸಾಬೀತಾಗಿ, 87ರ ಹರೆಯದಲ್ಲಿರುವ ಆತನಿಗೆ ಜೀವಾವಧಿ ಜೈಲು ಶಿಕ್ಷೆಯಾಗಿರುವುದು ಕಾನೂನು ಕೈಗಳು ಎಷ್ಟು ಉದ್ದ ಎಂಬುದು ಅಮೆರಿಕದ ನ್ಯಾಯಾಂಗ ಚರಿತ್ರೆಯಲ್ಲಿ ದಾಖಲಾಗುವಂತಾಯಿತು.  

ಟಾಪ್ ನ್ಯೂಸ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.