ಸಮರಕ್ಕೆ ಅಮೆರಿಕ ಸಿದ್ಧತೆ
Team Udayavani, Jan 17, 2018, 6:45 AM IST
ವಾಷಿಂಗ್ಟನ್: ಉತ್ತರ ಕೊರಿಯಾ ಮತ್ತು ಅಮೆರಿಕ ಮಧ್ಯೆ ಯುದ್ಧ ಭೀತಿ ಉಂಟಾಗಿ ತಿಂಗಳುಗಳೇ ಕಳೆದಿವೆ. ಉಭಯ ದೇಶಗಳ ನಾಯಕರ ಮಧ್ಯೆ ಮಾತಿನ ಸಮರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಸಾಗಿದಂತೆ ಅಮೆರಿಕದ ಸೇನೆ ಯುದ್ಧ ಸಿದ್ಧತೆ ನಡೆಸುತ್ತಿದೆ. ಕಳೆದ ತಿಂಗಳು ಉತ್ತರ ಕೆರೊಲಿನಾದಲ್ಲಿನ ಫೋಟ್ ಬ್ರಾಗ್ನಲ್ಲಿ 48 ಅಪಾಚೆ ಗನ್ಶಿಪ್ಗ್ಳು ಮತ್ತು ಚಿನೂಕ್ ಕಾರ್ಗೋ ಹೆಲಿಕಾಪ್ಟರುಗಳು ಕವಾಯತು ನಡೆಸಿವೆ. ಅಲ್ಲದೆ ಸಂಪೂರ್ಣ ಯುದ್ಧ ಸಿದ್ಧತೆಯ ಕವಾಯತು ನಡೆದಿವೆ. ನಂತರ ಎರಡು ದಿನಗಳ ಬಳಿಕ ನೆವಾಡಾದಲ್ಲಿ 119 ಯೋಧರು ಸಿ-17 ಯುದ್ಧ ವಿಮಾನದಿಂದ ಪ್ಯಾರಾಚೂಟ್ ಕಟ್ಟಿಕೊಂಡು ಹಾರಿ ಪ್ರಯೋಗ ನಡೆಸಿದ್ದಾರೆ.
ವಿದೇಶಕ್ಕೆ ತಕ್ಷ ಸೇನೆಯನ್ನು ಕಳುಹಿಸುವುದು ಹೇಗೆ ಎಂಬ ಬಗ್ಗೆ ಮುಂದಿನ ತಿಂಗಳು 1 ಸಾವಿರಕ್ಕೂ ಹೆಚ್ಚು ಮೀಸಲು ಯೋಧರಿಗೆ ತರಬೇತಿ ನೀಡಲಾಗುತ್ತದೆ. ಮುಂದಿನ ತಿಂಗಳು ದಕ್ಷಿಣ ಕೊರಿಯಾದಲ್ಲಿ ವಿಂಟರ್ ಒಲಿಂಪಿಕ್ಸ್ ನಡೆಯಲಿದ್ದು, ಈ ವೇಳೆ ಉತ್ತರ ಕೊರಿಯಾ ಗಡಿಗೆ ಹೆಚ್ಚಿನ ಸೇನೆಯನ್ನು ಜಮಾವಣೆ ಮಾಡಲು ನಿರ್ಧರಿಸಲಾಗಿದೆ.
ಹುಚ್ಚುನಾಯಿಯ ಕೂಗು!: ಉ.ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬಳಿ ಇರುವುದಕ್ಕಿಂತಲೂ ದೊಡ್ಡ ನ್ಯೂಕ್ಲಿಯರ್ ಬಟನ್ ನನ್ನ ಬಳಿ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಕ್ಕೆ ಉ.ಕೊರಿಯಾ ಪ್ರತಿಕ್ರಿಯಿಸಿದ್ದು, ಟ್ರಂಪ್ ಹೇಳಿಕೆ ಹುಚ್ಚುನಾಯಿ ಬೊಗಳಿದಂತಿದೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ