ಅಮೆರಿಕ ನೌಕೆಯಿಂದ ಸಾಗರ ಗಡಿ ಉಲ್ಲಂಘನೆ: ಚೀನ ಎಚ್ಚರಿಕೆ
Team Udayavani, Jan 20, 2018, 6:48 PM IST
ಬೀಜಿಂಗ್ : ಅಮೆರಿಕದ ಕ್ಷಿಪಣಿ ನಾಶಕ ನೌಕೆಯೊಂದು ತನ್ನ ಸಾಗರ ಗಡಿ ಉಲ್ಲಂಘನೆ ಗೈದಿರುವುದಾಗಿ ಆರೋಪಿಸಿರುವ ಚೀನ, ತನ್ನ ಗಡಿಯೊಳಗಿನ ತನ್ನ ಸಾರ್ವಭೌಮತೆಯನ್ನು ರಕ್ಷಿಸಲು ತಾನು ಅಗತ್ಯ ಕ್ರಮ ತೆಗೆದುಕೊಳ್ಳುವೆ’ ಎಂದು ವಾಷಿಂಗ್ಟನ್ಗೆ ಎಚ್ಚರಿಕೆ ನೀಡಿದೆ.
ಕಳೆದ ಜನವರಿ 17ರಂದು ಅಮೆರಿಕದ ಕ್ಷಿಪಣಿ ನಾಶಕ ಯಎಸ್ಎಸ್ ಹೂಪರ್ ನೌಕೆ ದಕ್ಷಿಣ ಚೀನ ಸಮುದ್ರದಲ್ಲಿನ ಹುವಾಂಗ್ಯಾನ್ ದಾವೋ ತೀರಕ್ಕೆ ಕೇವಲ 12 ನಾಟಿಕಲ್ ಮೈಲ್ ಸನಿಹದಲ್ಲಿ ಅಮೆರಿಕ ನೌಕೆ ಚೀನದ ಅನುಮತಿ ಇಲ್ಲದೆ ಹಾದು ಹೋಗಿದೆ. ಇದರಿಂದ ಚೀನದ ಸಾಗರಿಕ ಗಡಿಯ ಉಲ್ಲಂಘನೆಯಾಗಿದೆ ಎಂದು ಚೀನದ ವಿದೇಶ ಸಚಿವಾಲಯದ ವಕ್ತಾರ ಲೂ ಕಾಂಗ್ ಹೇಳಿದರು.
ಹುವಾಂಗ್ಯಾನ್ ದಾವೋ ದಕ್ಷಿಣ ಚೀನ ಸಮುದ್ರದಲ್ಲಿ ಫಿಲಿಪ್ಪೀನ್ಸ್ನಿಂದ ಸುಮಾರು 230 ಕಿ.ಮೀ.ದೂರದಲ್ಲಿರುವ ರಿಂಗ್ ಆಫ್ ರೀಫ್ ಎಂದೇ ಖ್ಯಾತವಾಗಿರುವ ಸ್ಕಾರ್ಬರೋ ಶೋವಾಲ್ ಎಂದೂ ತಿಳಿಯಲ್ಪಟ್ಟಿದ್ದು ಚೀನ ಇದು ತನ್ನದೆಂದು ಹೇಳಿಕೊಳ್ಳುತ್ತಿದೆ ಮತ್ತು ಇತರ ರಾಷ್ಟ್ರಗಳು ಇದನ್ನು ವಿರೋಧಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!