CONNECT WITH US  

ಕ್ರಿಸ್ತನ ಕುರಿತು ಗಾಂಧಿ ಬರೆದ ಪತ್ರ ಮಾರಾಟಕ್ಕೆ

ವಾಷಿಂಗ್ಟನ್‌: ಮಹಾತ್ಮ ಗಾಂಧಿ ಅವರು ಏಸು ಕ್ರಿಸ್ತನ ಕುರಿತು ಬರೆದಿದ್ದ ಭಾವನಾತ್ಮಕ ಪತ್ರವೊಂದು ಅಮೆರಿಕದಲ್ಲಿ 36.65 ಲಕ್ಷ ರೂ.ಗೆ ಮಾರಾಟಕ್ಕಿದೆ. ಗಾಂಧಿ ಈ ಪತ್ರವನ್ನು 1926ರ ಏ.6ರಲ್ಲಿ ಸಾಬರಮತಿ ಆಶ್ರಮದಿಂದ ಅಮೆರಿಕದ ಅಂದಿನ ಕ್ರೈಸ್ತ ಧಾರ್ಮಿಕ ಮುಖಂಡ ಮಿಲ್ಟನ್‌ ನ್ಯೂಬೆರ್ರಿ ಫ್ರಾಂಟ್ಸ್‌ಗೆ ಬರೆದಿದ್ದರು.

ಈ ಪತ್ರವನ್ನು ಪೆನ್ಸಿಲ್ವೇನಿಯಾದ ರಾಬ್‌ ಕಲೆಕ್ಷನ್‌ನಲ್ಲಿ ದಶಕಗಳ ಕಾಲ ಜತನವಾಗಿ ಇರಿಸಲಾಗಿತ್ತು. ಈಗ ಇದನ್ನು ಮಾರಾಟ ಮಾಡಲಾಗುತ್ತಿದೆ ಎಂದು ರಾಬ್‌ ಕಲೆಕ್ಷನ್‌ನ ಮುಖ್ಯಸ್ಥ ನಥಾನ್‌ ರಾಬ್‌ ಹೇಳಿದ್ದಾರೆ. ಏಸು ಕ್ರಿಸ್ತ ಮಾನವ ಜನಾಂಗದ ಅತ್ಯಂತ ಉತ್ತಮ ಬೋಧಕರಲ್ಲಿ ಒಬ್ಬರು. ಧಾರ್ಮಿಕ ಸಾಮ ರಸ್ಯ ಯಾಂತ್ರಿಕವಾಗಿ ಜನರ ಮೇಲೆ ಹೇರು ವುದರ ಮೂಲಕ ಸಾಧಿಸುವಂತಹದ್ದಲ್ಲ. ಒಂದು ಧರ್ಮಕ್ಕೆ ಸೇರಿದ ಜನರು ಮತ್ತೂಂದು ಧರ್ಮೀಯರನ್ನು ಗೌರವಿಸುವ ಮೂಲಕ ಸಾಧಿಸುವುದು ಎಂದು ಪತ್ರದಲ್ಲಿ ಹೇಳಿದ್ದಾರೆ. ಪತ್ರದ ಕುರಿತು ಮಾತನಾಡಿರುವ ನಥಾನ್‌, ಇದೊಂದು ಧಾರ್ಮಿಕ ಸಾಮರಸ್ಯ ಸಾರುವ ಭಾವನಾತ್ಮಕ ಪತ್ರ ಎಂದಿದ್ದಾರೆ.

Trending videos

Back to Top