CONNECT WITH US  

ಟೈಮ್‌ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಮೋದಿ, ಪುಟಿನ್‌, ಟ್ರಂಪ್‌

ನ್ಯೂಯಾರ್ಕ್‌ : ಸಮಕಾಲೀನ ಜಗತ್ತಿನ ಮೇಲೆ ಮಹತ್ತರ ಮತ್ತು ದೂರಗಾಮಿ ಪರಿಣಾಮ ಬೀರುವ  ವಿಶ್ವದ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಟೈಮ್‌ ಮ್ಯಾಗಜಿನ್‌ ಪಟ್ಟಿಗೆ ಸೇರ್ಪಡೆಯಾಗುವಲ್ಲಿ ಪ್ರಧಾನಿ ನರೇಂದ್ರ ಮೋದಿ, ಮೈಕ್ರೋ ಸಾಫ್ಟ್ ಭಾರತ ಸಂಜಾತ ಸಿಇಓ ಸತ್ಯ ನಾದೆಳ್ಲ, ಅಮೆರಿಕ  ಅಧ್ಯಕ್ಷ  ಡೊನಾಲ್ಡ್‌ ಟ್ರಂಪ್‌, ಈಚೆಗಷ್ಟೇ ನಾಲ್ಕನೇ ಬಾರಿಗೆ ಚುನಾಯಿತರಾಗಿರುವ ರಶ್ಯ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಮತ್ತು ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಪರಸ್ಪರ ತೀವ್ರ ಪೈಪೋಟಿಯಲ್ಲಿದ್ದಾರೆ. 

ಒಂದು ದಶಕಕ್ಕೂ ಹೆಚ್ಚು  ಕಾಲದಿಂದ ದಿ ಟೈಮ್‌ ಮ್ಯಾಗಜೀನ್‌ ವರ್ಷಂಪ್ರತಿ ವಿಶ್ವದ ನೂರು ಅತ್ಯಂತ ಪ್ರಭಾವೀ ವ್ಯಕ್ತಿಗಳನ್ನು ಪಟ್ಟಿ ಮಾಡುವ ಮೂಲಕ ಜಗತ್ತಿನ ಶ್ರೇಷ್ಠ ಮತ್ತು ಪ್ರಭಾವೀ ವಿಜ್ಞಾನಿಗಳನ್ನು, ಕಲಾವಿದರನ್ನು, ನಾಯಕರನ್ನು, ಕಾರ್ಯಕರ್ತರನ್ನು ಮತ್ತು ಉದ್ಯಮಪತಿಗಳನ್ನು ಗುರುತಿಸುತ್ತದೆ. 

ವಿಶ್ವದ ನೂರು ಅತ್ಯಂತ ಪ್ರಭಾವಿ ವ್ಯಕ್ತಿಗಳನ್ನು ಗುರುತಿಸುವಲ್ಲಿ ಟೈಮ್‌ ಸಂಪಾದಕರ ತೀರ್ಮಾನವೇ ಅಂತಿಮವಾಗಿದೆಯಾದರೂ ನಿಯತಕಾಲಿಕವು ತನ್ನ ಓದುಗರಿಗೆ ಆನ್‌ಲೈನ್‌ನಲ್ಲಿ  ತಮ್ಮ ಅಭಿಪ್ರಾಯದ ಪ್ರಕಾರದ ಪ್ರಭಾವಿ ವ್ಯಕ್ತಿಗೆ ಮತ ಹಾಕುವಂತೆ ಕೇಳಿಕೊಂಡಿದೆ. 


Trending videos

Back to Top