CONNECT WITH US  

ಭಾರತ ಮೂಲಕ ನೇಪಾಳಕ್ಕೆ ಚೀನಾದಿಂದ ಹೊಸ ರಸ್ತೆ!

ನೇಪಾಳ ಸರ್ಕಾರಕ್ಕೆ ಚೀನಾದ ಪ್ರಸ್ತಾಪ

ಬೀಜಿಂಗ್‌: ಭಾರತದ ಮೂಲಕ ನೇಪಾಳಕ್ಕೆ ಹೊಸ ರಸ್ತೆ ಮಾರ್ಗ ನಿರ್ಮಾಣದ ಪ್ರಸ್ತಾಪವನ್ನು ಚೀನಾ ಮಂಡಿಸಿದೆ.            ಹಿಮಾಲಯದ ಮೂಲಕ ಸಾಗುವ ಈ ರಸ್ತೆ ಮಾರ್ಗ ನೇಪಾಳ ಮತ್ತು ಭಾರತ ಸಂಪರ್ಕಿಸಲಿದೆ. ವಿದೇಶಾಂಗ ಸಚಿವ ಪ್ರದೀಪ್‌ ಕುಮಾರ್‌ ಗ್ಯವಾಲಿ ಚೀನಾ ಭೇಟಿ ವೇಳೆ ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಈ ಪ್ರಸ್ತಾಪ ಮಾಡಿದ್ದಾರೆ. ಈಗಾಗಲೇ ಬೆಲ್ಟ್ ಆಂಡ್‌ ರೋಡ್‌ ಇನಿಶಿಯೇಟಿವ್‌ ಒಪ್ಪಂದಕ್ಕೆ ನೇಪಾಳ ಹಾಗೂ ಚೀನಾ ಸಹಿ ಹಾಕಿವೆ.

ಭಾರತ ಮತ್ತು ನೇಪಾಳ ನಮ್ಮ ನೆರೆಯ ಮಿತೃರಾಷ್ಟ್ರಗಳಾಗಿವೆ. ಈ ರೀತಿಯ ಸಂಪರ್ಕ ಮಾರ್ಗವು ಎಲ್ಲ  3 ದೇಶಗಳಿಗೂ ಅಭಿವೃದ್ಧಿ ಅವಕಾಶಗಳನ್ನು ನೀಡಲಿದೆ ಎಂದು ಚೀನಾ ಹೇಳಿದೆ.

24 ಗಂಟೆಯೂ ವಿಚಕ್ಷಣೆ: ಇನ್ನೊಂದೆಡೆ, ಚೀನಾಗೆ ಪರೋಕ್ಷ ಎಚ್ಚರಿಕೆ ನೀಡಿರುವ ಭಾರತೀಯ ನೌಕಾಪಡೆ, ಹಿಂದೂ ಮಹಾಸಾಗರ ವಲಯದಲ್ಲಿ ದಿನದ 24 ಗಂಟೆಯೂ ವಿಚಕ್ಷಣೆ ನಡೆಸಲಾಗುತ್ತಿದೆ ಎಂದಿದೆ. ನೌಕಾಪಡೆಯ 50 ಹಡಗುಗಳು ನಮ್ಮ ಪ್ರದೇಶದಲ್ಲಿ ವಿಚಕ್ಷಣೆ ನಡೆಸುತ್ತಿವೆ. ಭಾರತೀಯ ನೌಕಾಪಡೆ, ಎಲ್ಲ ಸಮಯದಲ್ಲೂ ಎಲ್ಲೆಲ್ಲೂ ಇದೆ ಎಂದು ಹೇಳಿಕೊಂಡಿದೆ. ಹಿಂದು ಮಹಾಸಾಗರದಲ್ಲಿ ಆಗಾಗ್ಗೆ ಸಬ್‌ಮರೀನ್‌ಗಳ ಮೂಲಕ ಒಳನುಸುಳುವ ಚೀನಾಗೆ ಇದು ತಾಕೀತು ಎಂದೇ ಈ ಟ್ವೀಟ್‌ ಅನ್ನು ವಿಮರ್ಶಿಸಲಾಗುತ್ತಿದೆ.

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top