20 ವರ್ಷಗಳಲ್ಲೇ ಮೊದಲ ಭೇಟಿ
Team Udayavani, May 17, 2018, 6:00 AM IST
ಪ್ಯಾಂಗ್ಯಾಂಗ್: ಭಾರತದ ವಿದೇ ಶಾಂಗ ಇಲಾಖೆ ಸಹಾಯಕ ಸಚಿವ ವಿ.ಕೆ.ಸಿಂಗ್ ಬುಧವಾರ ಉತ್ತರ ಕೊರಿಯಾ ಪ್ರವಾಸ ಕೈಗೊಂಡಿದ್ದಾರೆ. ಭಾರತದ ಉನ್ನತ ಮಟ್ಟದ ನಾಯಕ ರೊಬ್ಬರು ಉ.ಕೊರಿಯಾಗೆ ಭೇಟಿ ನೀಡುತ್ತಿರು ವುದು 20 ವರ್ಷಗಳಲ್ಲಿ ಇದೇ ಮೊದಲು.
ಅಣ್ವಸ್ತ್ರ ನಿಶ್ಶಸ್ತ್ರೀಕರಣ ವಿಚಾರದಲ್ಲಿ ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಹಗ್ಗಜಗ್ಗಾಟ ನಡೆಯುತ್ತಿರುವ ವೇಳೆಯೇ ಸಚಿವ ಸಿಂಗ್ ಪ್ಯಾಂಗ್ಯಾಂಗ್ಗೆ ತೆರಳಿದ್ದು, ಅಲ್ಲಿನ ವಿದೇಶಾಂಗ ಸಚಿವರ ಜತೆ ಮಾತುಕತೆ ನಡೆಸಿದ್ದಾರೆ.
ಪಾಕ್ ಜತೆ ಉ.ಕೊರಿಯಾಗೆ ಇರುವ ಅಣ್ವಸ್ತ್ರ ನಂಟಿನ ಅನುಮಾನಗಳ ಕುರಿತು ಭಾರತದ ಕಳವಳದ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಉ. ಕೊರಿಯಾ,”ಭಾರತದ ಭದ್ರತೆಗೆ ಅಪಾಯ ಉಂಟುಮಾಡುವಂಥ ಯಾವ ಕ್ರಮಕ್ಕೂ ನಾವು ಅವಕಾಶ ನೀಡುವುದಿಲ್ಲ’ ಎಂದು ಭರವಸೆ ನೀಡಿದೆ. ಇನ್ನೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗಿನ ಭೇಟಿ ರದ್ದುಗೊಳಿಸುವ ಬೆದರಿಕೆಯನ್ನು ಉತ್ತರ ಕೊರಿಯಾ ಹಾಕುತ್ತಿದ್ದರೂ, ಟ್ರಂಪ್ ಅವರು ಭೇಟಿಗೆ ತಯಾರಿ ಮುಂದುವರಿಸಿರುವುದಾಗಿ ಅಮೆರಿಕ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ