7.5 ಲಕ್ಷಕ್ಕೆ ಚಿಕನ್ ಕರಿ ಮೆನು ಸೇಲ್
Team Udayavani, Jun 4, 2018, 6:55 AM IST
ಲಂಡನ್: ಎರಡು ಶತಮಾನಗಳ ಹಿಂದೆ ಸ್ಥಾಪಿಸಲ್ಪಟ್ಟು, ಆಂಗ್ಲರ ನೆಲದಲ್ಲಿ ಶುರುವಾದ ಭಾರತೀಯ ಖಾದ್ಯಗಳ ಮೊದಲ ರೆಸ್ಟೋರೆಂಟ್ ಎಂಬ ಹೆಗ್ಗಳಿಕೆ ಪಡೆದಿರುವ “ಹಿಂದೂಸ್ತಾನೆ ಡಿನ್ನರ್ ಆ್ಯಂಡ್ ಹುಕ್ಕಾ ಸ್ಮೋಕಿಂಗ್ ಕ್ಲಬ್’ ಎಂಬ ಹೆಸರಿನ ರೆಸ್ಟೋರೆಂಟ್ನ ಇತ್ತೀಚಿನ ಎರಡು ಖಾದ್ಯಗಳ ತಯಾರಿಕಾ ವಿಧಾನದ ಪುಸ್ತಿಕೆಯು 7.50 ಲಕ್ಷ ರೂ. ಮೊತ್ತಕ್ಕೆ ಮಾರಾಟವಾಗಿ, ಎಲ್ಲರ ಹುಬ್ಬೇರುವಂತೆ ಮಾಡಿದೆ.
ಈ ರೆಸ್ಟೋರೆಂಟ್ ಅನ್ನು 1809ರಲ್ಲಿ ಸೇಕ್ ಡೀನ್ ಮಹಮದ್ ಎಂಬವರು ಸ್ಥಾಪಿಸಿದ್ದರು. ಆಗಿನಿಂದಲೂ ಇದು ಲಂಡನ್ನ ಖ್ಯಾತ ಹೊಟೆಲ್ಗಳಲ್ಲೊಂದಾಗಿದೆ. ಈ ಹೊಟೆಲ್ನ “ಪೈನಾ ಪಲ್ ಪುಲಾವ್’ ಹಾಗೂ “ಚಿಕನ್ ಕರಿ’ಗೆ ಭಾರೀ ಡಿಮ್ಯಾಂಡ್ ಇದ್ದು, ಭಾರೀ ಜನಪ್ರಿಯತೆ ಪಡೆದಿದೆ. ಇವುಗಳ ಜನಪ್ರಿಯತೆ ಗಮನಿಸಿ, ಇವುಗಳ ತಯಾರಿಕಾ ವಿಧಾನದ ಪುಸ್ತಿಕೆಯೊಂದನ್ನು ರೆಸ್ಟೋರೆಂಟ್ ಹೊರ ತಂದಿತ್ತು. ಇತ್ತೀಚೆಗೆ, ನಡೆದ ಪುಸ್ತಕ ಪ್ರದರ್ಶನವೊಂದರಲ್ಲಿ ಈ ಪುಸ್ತಕಗಳು ಭರ್ಜರಿ ಮಾರಾಟ ಕಂಡು, 8,500 ಪೌಂಡ್ (7.50 ಲಕ್ಷ ರೂ.) ಗಳಿಸಿಕೊಟ್ಟಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ