CONNECT WITH US  

ಟ್ರಂಪ್‌ ವಿರುದ್ಧ ಪ್ರತಿಭಟನೆ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರ ವಲಸೆ ನೀತಿ ಖಂಡಿಸಿ ದೇಶಾದ್ಯಂತ ಅನಿವಾಸಿ ಭಾರತೀಯರು ಸೇರಿದಂತೆ ಸಹಸ್ರಾರು ಮಂದಿ ರವಿವಾರ ಪ್ರತಿಭಟನೆ ನಡೆಸಿದ್ದಾರೆ. ಟ್ರಂಪ್‌ ಸರಕಾರದ ವಿವಾದಿತ "ಶೂನ್ಯ ಸಹಿಷ್ಣುತೆ' ನೀತಿಯಿಂದಾಗಿ ವಲಸೆ ಬಂದವರು ತಮ್ಮ ಮಕ್ಕಳಿಂದ ಬೇರ್ಪಡೆಯಾಗಬೇಕಾಗುತ್ತದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪ್ರತಿಭಟನಾನಿರತರು ಘೋಷಣೆ ಕೂಗಿದ್ದಾರೆ. ಡೆಮಕ್ರಾಟಿಕ್‌ ಪಾರ್ಟಿ ನಾಯಕರು ಹಾಗೂ ಎಡಪಂಥೀಯ ಕಾಯಕರ್ತರು ಪ್ರತಿಭಟನಾ ರಾಲಿಯ ನೇತೃತ್ವ ವಹಿಸಿದ್ದರು. ಈ ನೀತಿಯಿಂದ ದೇಶದಲ್ಲಿ ನೈತಿಕ ಬಿಕ್ಕಟ್ಟು ಎದುರಾಗಲಿದೆ. ನಾವು ಪ್ರಜಾಪ್ರಭುತ್ವ ಉಳಿಸಲು ಹೋರಾಡುತ್ತೇವೆ ಎಂದು ಡೆಮಕ್ರಾಟಿಕ್‌ ಪಾರ್ಟಿ ನಾಯಕ ಟಾಮ್‌ ಪೆರೇಜ್‌ ತಿಳಿಸಿದ್ದಾರೆ.

Trending videos

Back to Top