ಮ್ಯಾನ್ಮಾರ್ನಲ್ಲಿ ರಸ್ತೆಗೆ ಚೀನಾ ಸಜ್ಜು

ಬೀಜಿಂಗ್: ಚೀನಾ ಪಾಕಿಸ್ತಾನ ಎಕಾನಮಿಕ್ ಕಾರಿಡಾರ್ ಮಾದರಿಯಲ್ಲೇ ಚೀನಾ ಮ್ಯಾನ್ಮಾರ್ ಎಕಾನಮಿಕ್ ಕಾರಿಡಾರ್ ನಿರ್ಮಾಣ ಮಾಡಲು ಚೀನಾ ಸಿದ್ಧವಾಗಿದ್ದು, ಈ ಸಂಬಂಧ ಶೀಘ್ರದಲ್ಲೇ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯಿದೆ. ಇದರಿಂದಾಗಿ ಮ್ಯಾನ್ಮಾರ್ನಲ್ಲಿ ಚೀನಾ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಲಿದ್ದು, ಇಲ್ಲಿ ಭಾರತದ ಪ್ರಭಾವ ಕಡಿಮೆಯಾಗುವ ಅಪಾಯವಿದೆ.
ಆದರೆ ಈ ಯೋಜನೆ ಅಷ್ಟೇನೂ ಸುಲಭ ದಲ್ಲಿ ಕಾರ್ಯಾಚರಣೆಗೆ ಬರುವ ಸಾಧ್ಯತೆಯಿಲ್ಲ. ಮ್ಯಾನ್ಮಾರ್ನ ಕೆಲವು ಭಾಗಗಳಲ್ಲಿ ಚೀನಾ ವಿರೋಧಿ ಮನಸ್ಥಿತಿಯಿದೆ. ಹೀಗಾಗಿ ಮ್ಯಾನ್ಮಾರ್ ಜನರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆಯಿದೆ. ಇನ್ನೊಂದೆಡೆ ಈ ಯೋಜನೆಯಿಂದಾಗಿ ಮ್ಯಾನ್ಮಾರ್ ಸಾಲದ ಸುಳಿಗೆ ಸಿಲುಕುವ ಸಾಧ್ಯತೆಯಿದ್ದು, ಇದೇ ಭೀತಿಯಿಂದಾಗಿ ಈ ಹಿಂದೆ ಚೀನಾ ಸಾಲದ ಅಡಿಯಲ್ಲಿ ನಿರ್ಮಿಸಲು ನಿರ್ಧರಿಸಲಾಗಿದ್ದ ಆಣೆಕಟ್ಟೆ ಯೋಜನೆಯನ್ನೂ ರದ್ದುಗೊಳಿಸ ಲಾಗಿತ್ತು. ಈ ಕಾರಿಡಾರ್ನಿಂದಾಗಿ ಚೀನಾದ ಯುನ್ನಾನ್ ಪ್ರಾಂತ್ಯದಿಂದ ಮ್ಯಾನ್ಮಾರ್ನ ಮಂಡಲೇಯ್, ಯಾಂಗಾನ್ನೂಸಿಟಿ ಮತ್ತು ಕ್ಯಾವಕ್ಫ್ಯೂ ನಗರಗಳು ಸಂಪರ್ಕಗೊಳ್ಳಲಿವೆ.