CONNECT WITH US  

ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಗೆ ಭಾರತಕ್ಕೆ ರಿಯಾಯಿತಿ?

ವಾಷಿಂಗ್ಟನ್‌: ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಗೆ ಅಮೆರಿಕ ಹೇರಿರುವ ನಿರ್ಬಂಧದಿಂದ ಕೆಲವು ದೇಶಗಳಿಗೆ ರಿಯಾಯಿತಿ ನೀಡಬೇಕು ಎಂದು ಅಮೆರಿಕ ರಕ್ಷಣಾ ಸಚಿವ ಜಿಮ್‌ ಮ್ಯಾಟಿಸ್‌ ವಾದಿಸಿದ್ದಾರೆ. ಆದರೆ ಹೇಳಿಕೆಯಲ್ಲಿ ಭಾರತವನ್ನು ಮ್ಯಾಟಿಸ್‌ ಉಲ್ಲೇಖೀಸಿಲ್ಲ. ಈ ಹಿಂದೆ ಹಲವು ಬಾರಿ ಮ್ಯಾಟಿಸ್‌ ಭಾರತದ ಪರವಾಗಿ ಮಾತನಾಡಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಈ ರಿಯಾಯಿತಿ ಲಭ್ಯವಾಗಲಿದೆ ಎನ್ನಲಾಗಿದೆ.

ರಷ್ಯಾದಿಂದ ಶಸ್ತ್ರಾಸ್ತ್ರಗಳ ಖರೀದಿಸುವ ಪ್ರಕ್ರಿಯೆಯನ್ನು ಕಡಿಮೆ ಮಾಡಿ ಅಮೆರಿಕ ಹಾಗೂ ಇತರ ದೇಶಗಳೊಂದಿಗೆ ಸಂಬಂಧ ಸುಧಾರಿಸಿಕೊಳ್ಳಲು ದೇಶಗಳಿಗೆ ಅವಕಾಶ ನೀಡಬೇಕಿದೆ ಎಂಬ ಕಾರಣಕ್ಕೆ ಮ್ಯಾಟಿಸ್‌ ಈ ರಿಯಾಯಿತಿ ಪ್ರಸ್ತಾವ‌ ಮಾಡಿದ್ದಾರೆ. ರಷ್ಯಾ ವಿರುದ್ಧ ಕ್ರಮ ಕೈಗೊಳ್ಳಲು ಅಮೆರಿಕ ಈ ನಿರ್ಬಂಧ ಹೇರಿದೆಯಾದರೂ ಇದು ಭಾರತದಂತಹ ದೇಶಗಳ ಮೇಲೆ ಪರಿಣಾಮ ಉಂಟು ಮಾಡಿದೆ. ಇತ್ತೀಚೆಗಷ್ಟೇ ಎಸ್‌-400 ಟ್ರೂಫ್ ಕ್ಷಿಪಣಿ ಖರೀದಿಸಲು ರಷ್ಯಾ ಜತೆ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದ ಮೇಲೆ ಈಗ ನಿರ್ಬಂಧದ ತೂಗುಗತ್ತಿ ಇದೆ.

Trending videos

Back to Top