CONNECT WITH US  

ಸೂರ್ಯನ ಸನಿಹಕ್ಕೆ ನಾಸಾ ನೌಕೆ

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್‌: ಇದೇ ಮೊದಲ ಬಾರಿಗೆ ಸೂರ್ಯನ ಸನಿಹಕ್ಕೆ ನೌಕೆಯನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕಳುಹಿಸಲಿದೆ. ಕಾರಿನ ಗಾತ್ರದ ಈ ನೌಕೆ ಸೂರ್ಯನಿಂದ 40 ಲಕ್ಷ ಕಿ.ಮೀ ದೂರದವರೆಗೆ ತೆರಳಿ, ಸೂರ್ಯನ ಬಿಸಿ ಹಾಗೂ ವಿಕರಣವನ್ನು ಎದುರಿಸಲಿದೆ.

ಪಾರ್ಕರ್‌ ಸೋಲಾರ್‌ ಪ್ರೋಬ್‌ ಎಂದು ಕರೆಯಲಾಗಿರುವ ನೌಕೆ ಆಗಸ್ಟ್‌ 6 ರಂದು ಉಡಾವಣೆಗೊಳ್ಳಲಿದೆ. ಈವರೆಗೆ ಯಾವುದೇ ನೌಕೆ ಸೂರ್ಯನ ಬಳಿ ಇಷ್ಟು ಸಮೀಪ ತೆರಳಿರಲಿಲ್ಲ. ಈ ನೌಕೆ ಸೂರ್ಯನ ಬಗ್ಗೆ ವಿಜ್ಞಾನಿಗಳಲ್ಲಿರುವ ಹಲವು ಪ್ರಶ್ನೆಗಳಿಗೆ ಉತ್ತರಿಸಲಿದೆ ಎನ್ನಲಾಗಿದೆ. ಸೂರ್ಯನಿಂದ 40 ಲಕ್ಷ ಕಿ.ಮೀ ದೂರದಲ್ಲಿ ಮಿಲಿಯನ್‌ ಡಿಗ್ರಿ ತಾಪಮಾನ ಇರಲಿದ್ದು, ಇದನ್ನು ಕೊರೊನಾ ಎಂದು ಕರೆಯಲಾಗಿದೆ.

ಈ ತಾಪಮಾನದಲ್ಲಿ ನೌಕೆ ಸುಟ್ಟು ಭಸ್ಮವಾಗದಂತೆ ತಡೆಯಲು ಕಾರ್ಬನ್‌ ಹೀಟ್‌ ಶೀಲ್ಡ್‌ಗಳನ್ನು ಬಳಸಲಾಗಿದೆ. ಹೊರಭಾಗದಲ್ಲಿ 1370 ಡಿಗ್ರಿ ಸೆಲಿÏಯಸ್‌ ಉಷ್ಣತೆ ಇದ್ದರೆ, ಒಳಭಾಗದಲ್ಲಿ ಕೇವಲ 30 ಡಿ.ಸೆ. ಇರುವಂತೆ ನೌಕೆಯನ್ನು ವಿನ್ಯಾಸ ಮಾಡಲಾಗಿದೆ. ಇನ್ನೊಂದೆಡೆ ಇದು ವಿದ್ಯುತ್‌ಗಾಗಿ ಸೌರ ಪ್ಯಾನೆಲ್‌ಗ‌ಳನ್ನು ಬಳಸುತ್ತಿದ್ದು, ವಿಪರೀತ ಉಷ್ಣದಿಂದ ತಡೆಯುವುದಕ್ಕಾಗಿ ಇದಕ್ಕೂ ಹೀಟ್‌ ಶೀಲ್ಡ್‌ ಬಳಸಲಾಗುತ್ತದೆ.
 

Trending videos

Back to Top