CONNECT WITH US  

ವ್ಯವಹಾರ ನಮ್ಮೊಂದಿಗೋ? ಇರಾನ್‌ ಜತೆಗೋ?: ಟ್ರಂಪ್‌

ಟೆಹರಾನ್‌: ಇರಾನ್‌ ವಿರುದ್ಧ ಹೊಸತಾಗಿ ದಿಗ್ಬಂಧನಗಳನ್ನು ಹೇರಿದ ಹೊರತಾಗಿಯೂ ಭಾರತ ಮತ್ತು ಇತರ ರಾಷ್ಟ್ರಗಳು ಆ ದೇಶದೊಂದಿಗೆ ವ್ಯಾಪಾರ ವಹಿವಾಟು ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ವಿಶ್ವದ ಇತರ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದೆ. ಆ ರಾಷ್ಟ್ರದ ವಿರುದ್ಧ ಇದುವರೆಗಿನ ಅತ್ಯಂತ ಕಠಿಣಾತಿ ಕಠಿಣ ದಿಗ್ಬಂಧನಗಳನ್ನು ಹೇರಲಾಗಿದೆ ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ. ಒಂದೋ ಇರಾನ್‌ ಜತೆಗೆ ಇಲ್ಲದಿದ್ದರೆ ನಮ್ಮ ಜತೆಗೆ ವಹಿವಾಟು ಮಾಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಈ ವರ್ಷದ ನವೆಂಬರ್‌ ವೇಳೆಗೆ ಹೊಸತೊಂದು ಮಜಲು ಇರಾನ್‌ ವಿಚಾರದಲ್ಲಿ ಹೊರಳಿಕೊಳ್ಳಲಿದೆ ಎಂದಿದ್ದಾರೆ.

ಭಾರತ ಇರಾನ್‌ ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ಅಮೆರಿಕ ಅಧ್ಯಕ್ಷರ ಹೊಸ ಎಚ್ಚರಿಕೆ ಗಮನಾರ್ಹವಾಗಿದೆ. 2015ರಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್‌ ಒಬಾಮಾ ಇರಾನ್‌ ಜತೆ ಮಾಡಿಕೊಂಡಿದ್ದ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಟ್ರಂಪ್‌ ಮೇನಲ್ಲಿ ಘೋಷಿಸಿದ್ದರು.

Trending videos

Back to Top