ಅಬ್ಬಾ..ಹೆರಿಗೆಗಾಗಿ ಸೈಕಲ್ನಲ್ಲಿ ಆಸ್ಪತ್ರೆಗೆ ತೆರಳಿದ ಸಚಿವೆ !
Team Udayavani, Aug 21, 2018, 11:53 AM IST
ವೆಲ್ಲಿಂಗ್ಟನ್ : ತುಂಬು ಗರ್ಭಿಣಿ ನಡೆಯುವಾಗಲು ತುಂಬಾ ಜಾಗರೂಕತೆ ಮಾಡಬೇಕು.ಆದರೆ ನ್ಯೂಜಿಲ್ಯಾಂಡ್ನ ಸಚಿವೆ ಜ್ಯೂಲಿ ಅನ್ನೆ ಜಂಟರ್ ಅವರು ತನ್ನ ಚೊಚ್ಚಲ ಹೆರಿಗೆಗಾಗಿ ಸೈಕಲ್ನಲ್ಲಿ ತೆರಳಿ ಆಸ್ಪತ್ರೆಗೆ ದಾಖಲಾಗುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
38 ರ ಹರೆಯದ ಜ್ಯೂಲಿ ಅವರು ತಾನು ಪತಿಯೊಂದಿಗೆ ಸೈಕಲ್ನಲ್ಲಿ ಆಸ್ಪತ್ರೆಗೆ ತೆರಳುತ್ತಿರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು ಅದೀಗ ವಿಶ್ವಾದ್ಯಂತ ವೈರಲ್ ಆಗಿದೆ ಇಂಟರ್ನೆಟ್ನಲ್ಲಿ ಬಿರುಗಾಳಿ ಎಬ್ಬಿಸಿದೆ.
ಪೋಸ್ಟ್ನಲ್ಲಿ ಕಾರಿನಲ್ಲಿ ತೆರಳಲು ಬೆಂಗಾವಲು ಸಿಬಂದಿಗೆ ಸಾಕಷ್ಟು ಜಾಗವಿರಲ್ಲಿಲ್ಲ ಎಂದು ಬರೆಯುವ ಮೂಲಕ ಸರಳತೆಯನ್ನು ತೋರಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಸೈಕ್ಲಿಂಗ್ ಹೆರಿಗೆಗೆ ಮುನ್ನ ನನಗೆ ಉತ್ತಮ ಮನಸ್ಥಿತಿ ತಂದು ಕೊಡಲು ಕಾರಣವಾಗಿದೆ ಎಂದು ಜ್ಯೂಲಿ ಹೇಳಿಕೊಂಡಿದ್ದಾರೆ.
ಜ್ಯೂಲಿ ಅವರು ಅಧಿಕಾರದಲ್ಲಿರುವಾಗಲೇ ತಾಯಿಯಾದ ನ್ಯೂಜಿಲ್ಯಾಂಡ್ ಸರ್ಕಾರದ 2 ನೇ ಪ್ರತಿನಿಧಿ ಎನಿಸಿಕೊಂಡಿದ್ದಾರೆ. ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂಡಾ ಅವರು ಈ ಹಿಂದೆ ಅಧಿಕಾರದಲ್ಲಿರುವಾಗಲೇ ತಾಯಿಯಾಗಿದ್ದರು.
ಪಾಕ್ ಪ್ರಧಾನಿಯಾಗಿದ್ದ ದಿವಂಗತ ಬೆನಝಿರ್ ಬುಟ್ಟೋ ಅವರು ಅಧಿಕಾರದಲ್ಲಿರುವಾಗಲೆ ಮಗುವಿಗೆ ಜನ್ಮ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು