CONNECT WITH US  

ಪಾಕ್‌ಗೆ ಸಿಗದು 2 ಸಾವಿರ ಕೋಟಿ ನೆರವು

ಉಗ್ರ ಸಂಘಟನೆಗಳ ಮಟ್ಟ ಹಾಕದ್ದಕ್ಕೆ ಅಮೆರಿಕದಿಂದ ತಕ್ಕ ಪಾಠ

ವಾಷಿಂಗ್ಟನ್‌: ಭಯೋತ್ಪಾದಕರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ್ದರಿಂದ ಪಾಕಿಸ್ಥಾನಕ್ಕೆ ನೀಡಬೇಕಾಗಿದ್ದ 2,130 ಕೋಟಿ ರೂ. ಮೊತ್ತದ ನೆರವನ್ನು ಅಮೆರಿಕ ರದ್ದು ಮಾಡಿದೆ. ಪ್ರಧಾನಿಯಾಗಿ ಇಮ್ರಾನ್‌ ಖಾನ್‌ ಪ್ರಮಾಣ ವಚನ ಸ್ವೀಕರಿಸಿ 16 ದಿನ ಕಳೆಯುವಷ್ಟರಲ್ಲಿಯೇ ಡೊನಾಲ್ಡ್‌ ಟ್ರಂಪ್‌ ಸರಕಾರ ಆರ್ಥಿಕ ಆಘಾತ ನೀಡಿದೆ. ಸೆ. 6ರಂದು ದಿಲ್ಲಿಯಲ್ಲಿ ಅಮೆರಿಕ-ಭಾರತ ನಡುವಿನ ಮೊದಲ 2+2 ಮಾತುಕತೆಗಳಿಗೆ ಪೂರಕವಾಗಿ ಈ ಬೆಳವಣಿಗೆ ನಡೆದಿರುವುದು ಭಾರತಕ್ಕೆ ಧನಾತ್ಮಕವೇ ಆಗಿದೆ.

ಭಾರತದಲ್ಲಿ ಸಕ್ರಿಯವಾಗಿ ರುವ ಲಷ್ಕರ್‌-ಎ-ತಯ್ಯಬಾ, ಹಕ್ಕಾನಿ ನೆಟ್‌ವರ್ಕ್‌ ಸಹಿತ ಹಲವು ಉಗ್ರ ಸಂಘಟನೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ್ದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ. ಆದರೆ ಅಮೆರಿಕದ ಸಂಸತ್‌ನಲ್ಲಿ ಈ ವಿಚಾರ ಅನುಮೋದನೆ ಪಡೆಯಬೇಕಾಗಿದೆ. ಅಮೆರಿಕ ವಿದೇಶಾಂಗ ಸಚಿವ ಮೈಕ್‌ ಪೊಂಪೊ ಅವರು ಪಾಕ್‌ ಪ್ರಧಾನಿ ಇಮ್ರಾನ್‌ ಭೇಟಿಗಾಗಿ ಇಸ್ಲಾಮಾ ಬಾದ್‌ಗೆ ತೆರಳಲಿರುವಂತೆಯೇ ಈ ನಿರ್ಧಾರ ಪ್ರಕಟವಾಗಿದೆ.

ಡೊನಾಲ್ಡ್‌ ಟ್ರಂಪ್‌ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಮೊದಲ ದಿನದಿಂದಲೇ ಪಾಕಿಸ್ಥಾನದ ವಿರುದ್ಧ ಕಠಿನ ನಿರ್ಣಯಗಳನ್ನು ಪ್ರಕಟಿಸುತ್ತಲೇ ಬಂದಿದ್ದಾರೆ.


Trending videos

Back to Top