CONNECT WITH US  

ಹಿಜಾಬ್‌ನಲ್ಲೇ ರ್‍ಯಾಂಪ್‌ವಾಕ್‌ 

ಲಂಡನ್‌: ಇದೇ ಮೊದಲ ಬಾರಿಗೆ ಮಿಸ್‌ ಇಂಗ್ಲೆಂಡ್‌ ಸೌಂದರ್ಯ ಸ್ಪರ್ಧೆಯ ಅಂತಿಮ ಘಟ್ಟದಲ್ಲಿ 20ರ ಮುಸ್ಲಿಂ ಯುವತಿಯೊಬ್ಬರು ಹಿಜಾಬ್‌ ಧರಿಸಿ ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕ ಲಿದ್ದಾರೆ. ಈ ಮೂಲಕ ಸ್ಪರ್ಧೆಯಲ್ಲಿ ಹಿಜಾಬ್‌ ಧರಿಸಿ ಸ್ಪರ್ಧಿಸಲಿರುವ ಮೊದಲ ಮಹಿಳೆ ಎನಿಸಿಕೊಳ್ಳಲಿದ್ದಾರೆ ಸಾರಾ ಇಫ್ತಿಕಾರ್‌.

ಇವರು ಸ್ಪರ್ಧೆಯ ಎಲ್ಲಾ ಹಂತಗಳಲ್ಲೂ ಹಿಜಾಬ್‌ ಧರಿಸಿಯೇ ಆತ್ಮವಿಶ್ವಾಸದ ಪ್ರದ ರ್ಶನ ನೀಡಿದ್ದಾರೆ. ಇವರು ಕಿರೀಟ ಗೆಲ್ಲುವ ನಿರೀಕ್ಷೆ ಇರುವ ಸ್ಪರ್ಧಿ ಕೂಡ ಹೌದು ಎಂದು ಇಲ್ಲಿಯ ಪತ್ರಿಕೆಯೊಂದು ವರದಿ ಮಾಡಿದೆ. ಕಾನೂನು ವಿದ್ಯಾರ್ಥಿಯಾಗಿರುವ ಸಾರಾ ಮಿಸ್‌ ಹಡ್ಡರ್ಫೀಲ್ಡ್‌ ಮತ್ತು ಯಾರ್ಕ್‌ ಶೈರ್‌ನ ಮಿಸ್‌ ಪಾಪ್ಯುಲಾರಿಟಿ ಹಂತವನ್ನು ಗೆದ್ದಿದ್ದಾರೆ.

Trending videos

Back to Top