CONNECT WITH US  

ವಿಮಾನ ಪತನ: 21 ಸಾವು

ಜುಬಾ: ದಕ್ಷಿಣ ಸುಡಾನ್‌ನಲ್ಲಿ ಓವರ್‌ಲೋಡ್‌ ಆಗಿದ್ದ ವಾಣಿಜ್ಯ ವಿಮಾನವೊಂದು ಪತನಗೊಂಡಿದ್ದು, 21 ಮಂದಿ ಮೃತಪಟ್ಟಿದ್ದಾರೆ. ಸುಡಾನ್‌ ರಾಜಧಾನಿ ಜುಬಾದಿಂದ ಹೊರಟಿದ್ದ 19 ಆಸನಗಳ ಸಾಮರ್ಥ್ಯದ ವಿಮಾನವು ದಕ್ಷಿಣ ಸುಡಾನ್‌ನ ಸರೋವರವೊಂದರಲ್ಲಿ ಪತನಗೊಂಡಿದೆ. ಈ ವಿಮಾನದಲ್ಲಿ 24 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ 21 ಮಂದಿ ಮೃತಪಟ್ಟಿದ್ದು, 6 ವರ್ಷದ ಮಗು, ಇಟಲಿಯ ವೈದ್ಯ ಸೇರಿದಂತೆ ಮೂವರು ಮಾತ್ರ ಬದುಕುಳಿದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಮಾನ ಪತನಕ್ಕೆ ಕಾರಣ ತಿಳಿದುಬಂದಿಲ್ಲ.


Trending videos

Back to Top