CONNECT WITH US  

ಮಾಜಿ ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಪತ್ನಿ ಬೇಗಂ ಕುಲ್‌ಸೂಮ್‌ ವಿಧಿವಶ

ಲಂಡನ್‌ : ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್ ಅವರ ಪತ್ನಿ ಬೇಗಂ ಕುಲ್‌ಸೂಮ್‌ ನವಾಜ್‌ (68) ಅವರು ಇಂದು ಮಂಗಳವಾರ ಲಂಡನ್‌ನಲ್ಲಿ ನಿಧನ ಹೊಂದಿದರು. 

ಕಳೆದ ಕೆಲವು ತಿಂಗಳು ಕುಲ್‌ಸೂಮ್‌ ಅವರು ಗಂಟಲು ಕ್ಯಾನ್ಸರ್‌ ಗೆ ಚಿಕಿತ್ಸೆ ಪಡೆಯುತ್ತಿದ್ದರು.  ಲಂಡನ್‌ನ ಹಾರ್ಲೆ ಸ್ಟ್ರೀಟ್‌ ಕ್ಲಿನಿಕ್‌ನಲ್ಲಿ ಅವರು ಇಂದು ಕೊನೆಯುಸಿರೆಳೆದರು.

ಕುಲ್‌ಸೂಮ್‌ ನಿಧನರಾಗಿರುವುದನ್ನು ಪಿಎಂಎಲ್‌ಎನ್‌ ಪಕ್ಷದ ಅಧ್ಯಕ್ಷ ಶಹಬಾಜ್‌ ಷರೀಫ್ ಅವರು ಟ್ವಿಟರ್‌ ಮೂಲಕ ದೃಢೀಕರಿಸಿದ್ದಾರೆ. 

ಬೇಗಂ ಕುಲ್‌ಸೂಮ್‌ ಅವರು ಪತಿ ನವಾಜ್‌ ಷರೀಫ್ ಮತ್ತು ಪುತ್ರಿ ಮರ್ಯಾಮ್‌ ಅವರನ್ನು ಅಗಲಿದ್ದಾರೆ. ಇವರಿಬ್ಬರೂ ಪ್ರಕೃತ ರಾವಲ್ಪಿಂಡಿಯ ಆದಿಯಾಲಾ ಜೈಲಿನಲ್ಲಿ ಇದ್ದಾರೆ. ಏವನ್‌ ಫೀಲ್ಡ್‌ ಪ್ರಾಪರ್ಟಿ ಕೇಸಿನಲ್ಲಿ ಇವರು ಅಪರಾಧಿಗಳೆಂದು ಘೋಷಿಸಲ್ಪಟ್ಟ ಬಳಿಕ ಇವರು ಇಸ್ಲಾಮಾಬಾದ್‌ ಗೆ ಬಂದೊಡನೆಯೇ ಬಂಧನಕ್ಕೆ ಗುರಿಯಾಗಿದ್ದರು. 

1950ರಲ್ಲಿ ಜನಿಸಿದ್ದ ಬೇಗಂ ಕುಲ್‌ಸೂಮ್‌ ಅವರು 1971ರಲ್ಲಿ ನವಾಜ್‌ ಷರೀಫ್ ಅವರನ್ನು ಮದುವೆಯಾಗಿದ್ದರು. 


Trending videos

Back to Top