CONNECT WITH US  

ಜೈಲುಶಿಕ್ಷೆ ರದ್ದುಗೊಳಿಸಿದ ಪಾಕ್ ಕೋರ್ಟ್; ಷರೀಫ್, ಮಗಳು ಬಿಡುಗಡೆ

ಇಸ್ಲಾಮಾಬಾದ್: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ  ಜೈಲುಪಾಲಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್, ಪುತ್ರಿ ಮಾರಿಯಮ್, ಅಳಿಯ ಮೊಹಮ್ಮದ್ ಸಫ್ದಾರ್ ಅವಾನ್ ಗೆ ವಿಧಿಸಿದ್ದ 10 ವರ್ಷಗಳ ಜೈಲುಶಿಕ್ಷೆ ತೀರ್ಪನ್ನು ಪಾಕ್ ಹೈಕೋರ್ಟ್ ಬುಧವಾರ ಅಮಾನತ್ತಿನಲ್ಲಿಟ್ಟು, ಜಾಮೀನು ನೀಡಿ ಬಿಡುಗಡೆ ಮಾಡುವಂತೆ ಆದೇಶ ನೀಡಿರುವುದಾಗಿ ನ್ಯೂಸ್ ಏಜೆನ್ಸಿ ರಾಯಟರ್ಸ್ ವರದಿ ಮಾಡಿದೆ.

ನವಾಜ್ ಷರೀಫ್ (68ವರ್ಷ), ಮಗಳು ಮಾರಿಯಮ್ (44ವರ್ಷ) ಹಾಗೂ ಅಳಿಯ ಮೊಹಮ್ಮದ್ ಜುಲೈ 13ರಂದು ಲಂಡನ್ ನಿಂದ ಪಾಕಿಸ್ತಾನಕ್ಕೆ ಆಗಮಿಸಿದ್ದ ವೇಳೆ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.ಲಂಡನ್ ನಲ್ಲಿ ಹೊಂದಿದ್ದ ಐಶಾರಾಮಿ ಫ್ಲ್ಯಾಟ್ ಗೆ ಸಂಬಂಧಿಸಿದ ಪ್ರಕರಣದಲ್ಲಿ ದೋಷಿ ಎಂದು ಕೋರ್ಟ್ ತೀರ್ಪು ನೀಡಿ ಶಿಕ್ಷೆ ವಿಧಿಸಿತ್ತು.


Trending videos

Back to Top