ಅಮೆರಿಕ-ಚೀನ ವಾಣಿಜ್ಯ ಬಿಕ್ಕಟ್ಟಿನಿಂದ ನಮಗೆ ಉತ್ತಮ ಅವಕಾಶ: ಪಾಕಿಸ್ಥಾನ
Team Udayavani, Oct 4, 2018, 3:32 PM IST
ಇಸ್ಲಾಮಾಬಾದ್ : ಅಮೆರಿಕ ಮತ್ತು ಚೀನ ನಡುವಿನ ತೀವ್ರಗೊಳ್ಳುತ್ತಿರುವ ವಾಣಿಜ್ಯ ಸುಂಕ ಸಮರದಿಂದ ತನಗೆ ಉತ್ತಮ ಅವಕಾಶ ಪ್ರಾಪ್ತವಾಗಲಿದೆ, ಅಂತೆಯೇ ಪರೋಕ್ಷ ಲಾಭವಾಗಲಿದೆ ಎಂದು ಪಾಕಿಸ್ಥಾನ ಹೇಳಿಕೊಂಡಿದೆ.
“ಅಮೆರಿಕ ಮತ್ತು ಚೀನ ನಡುವೆ ಹೆಚ್ಚುತ್ತಿರುವ ವಾಣಿಜ್ಯ ಸುಂಕ ಸಮರವು ಪಾಕಿಸ್ಥಾನಕ್ಕೆ ಶುಭ ಸೂಚಕವಾಗಿದೆ; ಇದರಿಂದಾಗಿ ನಾವು ಇನ್ನೂ ಉತ್ತಮ ಚೌಕಾಶಿ ನಡೆಸುವ ಸ್ಥಿತಿಯಲ್ಲಿ ಇರುವೆವು’ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಸಲಹೆಗಾರರಾಗಿರುವ ರಜಾಕ್ ದಾವೂದ್ ಹೇಳಿರುವುದನ್ನು ಉಲ್ಲೇಖೀಸಿ ಅನೇಕ ಸುದ್ದಿ ವಾಹಿನಿಗಳು ವರದಿ ಮಾಡಿವೆ.
ಪ್ರಧಾನಿ ಇಮ್ರಾನ್ ಖಾನ್ ನ.4ರಂದು ಚೀನಕ್ಕೆ ಭೇಟಿ ನೀಡಲಿದ್ದಾರೆ. ಆಗ ನಾವು ಚೀನದ ವಾಣಿಜ್ಯ ಪಾಲುದಾರ ದೇಶವಾಗಿ ಸುಂಕ ಸಮರದ ಲಾಭವನ್ನು ಹೊಡೆದುಕೊಳ್ಳುವೆವು ಎಂದು ದಾವೂದ್ ಅವರು ಕೈಗಾರಿಕೆ ಮತ್ತು ಉತ್ಪಾದನೆಯ ಸ್ಥಾಯಿ ಸೆನೆಟ್ ಸಮಿತಿಯ ಮುಂದೆ ಹೇಳಿದರು. ಚೀನವು ಪಾಕಿಸ್ಥಾನದಿಂದ ಮಾಡುತ್ತಿರುವ ಆಮದನ್ನು ಕನಿಷ್ಠ 2 ಶತಕೋಟಿ ಡಾಲರ್ಗೆ ಏರಿಸಬೇಕು ಎಂದು ಇಸ್ಲಾಮಾಬಾದ್ ಬಯಸುತ್ತದೆ ಎಂದು ದಾವೂದ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!