ಭರ್ಜರಿ ದಂಧೆ;ರೂಪದರ್ಶಿಯ ನಗ್ನ ಫೋಟೋ ತೆಗೆದ ಯುವತಿಗೆ ಜೈಲುಶಿಕ್ಷೆ!
Team Udayavani, Oct 5, 2018, 3:20 PM IST
ಸಿಯೋಲ್:ರೂಪದರ್ಶಿಯ ನಗ್ನ ಫೋಟೋಗಳನ್ನು ರಹಸ್ಯವಾಗಿ ಸೆರೆಹಿಡಿದಿದ್ದ ಯುವತಿಯೊಬ್ಬಳಿಗೆ ದಕ್ಷಿಣ ಕೊರಿಯಾದ ಕೋರ್ಟ್ ಹತ್ತು ತಿಂಗಳ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಆರೋಪಿಯನ್ನು ಆ್ಯನ್ ಎಂದು ಗುರುತಿಸಲಾಗಿದೆ. ಅಲ್ಲದೇ ಲೈಂಗಿಕ ಹಿಂಸಾಚಾರ ಅಪರಾಧದ ಒಂದು ಭಾಗ ಎಂಬುದನ್ನು ಕೌನ್ಸಿಲಿಂಗ್ ಮಾಡುವ ಮೂಲಕ ಆಕೆಗೆ ಮನವರಿಕೆ ಮಾಡಲಾಗಿದೆ ಎಂದು ವರದಿ ವಿವರಿಸಿದೆ.
ಇತ್ತೀಚೆಗೆ ದಕ್ಷಿಣ ಕೊರಿಯಾದಲ್ಲಿ ಸ್ವಯಂಘೋಷಿತ ಸ್ಪೈಕ್ಯಾಮ್ ವಿಡಿಯೋಗಳ ಹಾವಳಿ ಮಿತಿಮೀರ ತೊಡಗಿದೆಯಂತೆ. ಶಾಲೆ, ಕಚೇರಿ, ರೈಲುಗಳು, ಶೌಚಾಲಯಗಳಲ್ಲಿ, ಬಟ್ಟೆ ಬದಲಾಯಿಸುವ ಕೋಣೆ ಸೇರಿದಂತೆ ಎಲ್ಲೆಂದರಲ್ಲಿ ಮಹಿಳೆಯರ ನಗ್ನ ದೇಹವನ್ನು ರಹಸ್ಯವಾಗಿ ವಿಡಿಯೋ ಮಾಡುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ ಎಂದು ವರದಿ ವಿವರಿಸಿದೆ.
ಈ ರೀತಿ ರಹಸ್ಯವಾಗಿ ಚಿತ್ರೀಕರಿಸಿದ ನಗ್ನ ವಿಡಿಯೋ ಮತ್ತು ಫೋಟೋಗಳನ್ನು ಅಂತರ್ಜಾಲ ತಾಣಗಳಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಾರೆ. ಸಂತ್ರಸ್ತೆ ರೂಪದರ್ಶಿಯ ನಗ್ನ ಪೋಟೋ ಆನ್ ಲೈನ್ ನಲ್ಲಿ ಹರಿದಾಡುವ ಮೂಲಕ ಆಕೆ ಬಹಿರಂಗವಾಗಿಯೇ ಟೀಕೆಗೊಳಗಾಗಿದ್ದು, ಇದರಿಂದ ರೂಪದರ್ಶಿ ಮಾನಸಿಕ ಒತ್ತಡಕ್ಕೆ ಒಳಗಾಗಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು