ದೀರ್ಘಾವಧಿ ಪ್ರಯಾಣ: ದಾಖಲೆ ಬರೆದ ಸಿಂಗಾಪುರ ಏರ್ಲೈನ್ಸ್
Team Udayavani, Oct 13, 2018, 9:54 AM IST
ನ್ಯೂಯಾರ್ಕ್: ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಅತಿ ದೀರ್ಘ ಪ್ರಯಾಣ ಮಾಡಿದ ವಾಣಿಜ್ಯ ವಿಮಾನವೆಂಬ ಹೆಗ್ಗಳಿಕೆಗೆ ಸಿಂಗಾಪುರ ಏರ್ಲೈನ್ಸ್ನ “ಎಸ್.ಕ್ಯು. 22′ ಪಾತ್ರವಾಗಿದೆ. 150 ಪ್ರಯಾಣಿಕರು, 17 ಸಿಬಂದಿ ಹೊಂದಿದ್ದ ಈ ವಿಮಾನ ಸಿಂಗಾಪುರದಿಂದ ಗುರುವಾರ ಹೊರಟು, ಒಟ್ಟು 16,500 ಕಿ.ಮೀ.ಗಳಷ್ಟು ದೂರ ಕ್ರಮಿಸಿ, ಶುಕ್ರವಾರ ಮುಂಜಾನೆ ಅಮೆರಿಕದ ನೆವಾರ್ಕ್ ಲಿಬರ್ಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಈ ಮೂಲಕ, ಒಟ್ಟು 17 ಗಂಟೆ 52 ನಿಮಿಷಗಳ ಕಾಲ ಹಾರಾಟ ನಡೆಸುವ ಮೂಲಕ ಈ ವಿಮಾನ ಹೊಸ ದಾಖಲೆ ಬರೆದಿದೆ.
ಈ ಹಿಂದೆ, ಆಕ್ಲೆಂಡ್ನಿಂದ ದೋಹಾಕ್ಕೆ 17 ಗಂಟೆ, 40 ನಿಮಿಷಗಳ ಕಾಲ ಸತತ ಪ್ರಯಾಣ ಮಾಡಿದ್ದ ಕತಾರ್ ಏರ್ವೆಸ್ ಫ್ಲೈಟ್ 921 ವಿಮಾನ ಈ ದಾಖಲೆ ಹೊಂದಿತ್ತು. ಅಂದಹಾಗೆ, ಸಿಂಗಾಪುರ- ಅಮೆರಿಕ ನಡುವಿನ ಒಂದು ಟ್ರಿಪ್ಗೆ ಪ್ರಯಾಣಿಕರು ಕನಿಷ್ಠ 1,58,000 ರೂ. (ಪ್ರೀಮಿಯಂ ಎಕಾನಮಿ) ತೆರಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು