ರಷ್ಯಾ ಅಣು ಒಪ್ಪಂದ ರದ್ದು
Team Udayavani, Oct 22, 2018, 11:38 AM IST
ವಾಷಿಂಗ್ಟನ್/ಲಂಡನ್: ಇರಾನ್ ಜತೆಗಿನ ಪರಮಾಣು ನಿಷೇಧ ಒಪ್ಪಂದ ರದ್ದು ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ರಷ್ಯಾ ಜತೆಗಿನ ಅಣ್ವಸ್ತ್ರ ಒಪ್ಪಂದ ವನ್ನು ಅಮೆರಿಕ ರದ್ದುಗೊಳಿಸಿದೆ. 1987ರಲ್ಲಿ ಅಂದರೆ 30 ವರ್ಷಗಳ ಹಿಂದೆ ಅಮೆರಿಕ ಮತ್ತು ರಷ್ಯಾ ಮಾಡಿಕೊಂಡಿದ್ದ ಇಂಟರ್ ಮೀಡಿಯೆಟ್ ರೇಂಜ್ ನ್ಯೂಕ್ಲಿಯರ್ ಫೋರ್ಸಸ್ (ಐಎನ್ಎಫ್) ಒಪ್ಪಂದ ವನ್ನು ರಷ್ಯಾ ಪದೇ ಪದೆ ಉಲ್ಲಂ ಸಿದೆ. ಇತ್ತೀಚೆ ಗಷ್ಟೇ ರಷ್ಯಾ, ಮಧ್ಯಮ ಶ್ರೇಣಿಯ ಕ್ಷಿಪಣಿ ಯೊಂದನ್ನು ಪರೀಕ್ಷೆ ನಡೆಸಿದೆ. ಹೀಗಾಗಿ ನಾವು ನಿಷೇಧಿಸಿರುವ ಅಣ್ವಸ್ತ್ರಗಳನ್ನು ರಷ್ಯಾ ಉತ್ಪಾದನೆ ಮಾಡಬಾರದು ಎಂದು ಟ್ರಂಪ್ ಹೇಳಿದ್ದಾರೆ. ಈ ಹಿಂದೆ ಬರಾಕ್ ಒಬಾಮಾ ಅಧ್ಯಕ್ಷ ರಾಗಿದ್ದಾಗಲೇ ಯಾಕೆ ಒಪ್ಪಂದ ರದ್ದುಗೊಳಿಸಿಲ್ಲ ಎಂದು ನನಗೆ ಅಚ್ಚರಿಯಾಗು ತ್ತಿದೆ. ರಷ್ಯಾ ಹಲವು ವರ್ಷಗಳಿಂದಲೂ ಈ ಒಪ್ಪಂದ ಉಲ್ಲಂ ಸುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ. ಟ್ರಂಪ್ ಕ್ರಮಕ್ಕೆ ಬ್ರಿಟನ್ ಬೆಂಬಲ ವ್ಯಕ್ತಪಡಿಸಿದೆ.
1987ರ ಈ ಒಪ್ಪಂದಕ್ಕೆ ಆಗ ಅಮೆರಿಕ ಅಧ್ಯಕ್ಷರಾಗಿದ್ದ ರೊನಾಲ್ಡ್ ರೇಗನ್ ಮತ್ತು ರಷ್ಯಾ ಅಧ್ಯಕ್ಷ ಮಿಖಾಯಿಲ್ ಗೋರ್ಬಚೆವ್ ಸಹಿ ಹಾಕಿದ್ದರು. ಈ ಒಪ್ಪಂದದ ಪ್ರಕಾರ 300 ರಿಂದ 3,400 ಮೈಲು ದೂರದವರೆಗೆ ಚಿಮ್ಮುವ ನೆಲದಿಂದ ಉಡಾವಣೆ ಮಾಡುವ ಅಣ್ವಸ್ತ್ರವನ್ನು ಅಭಿವೃದ್ಧಿಪಡಿಸುವುದು, ತಯಾರಿ ಸುವುದು ನಿಷೇಧವಾಗಿತ್ತು.
ಆದರೆ ಇತ್ತೀಚೆಗೆ ರಷ್ಯಾ 310ರಿಂದ 3,400 ಮೈಲು ಗಳಷ್ಟು ದೂರದವರೆಗೆ ಚಿಮ್ಮಬಹುದಾದ ನೆಲ ದಿಂದ ಉಡಾವಣೆ ಮಾಡುವ ಅಣ್ವಸ್ತ್ರ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ.