CONNECT WITH US  

ಅಮೆರಿಕ ಮಧ್ಯಾವಧಿ ಚುನಾವಣೆ: ಕೆಳಮನೆ ಡೆಮೋಕ್ರಾಟ್‌ಗಳ ವಶ

ವಾಷಿಂಗ್ಟನ್‌ : ಅಮೆರಿಕದಲ್ಲಿ ನಡೆದಿರುವ ಮಧ್ಯಾವಧಿ ಚುನಾವಣೆಯಲ್ಲಿ ಡೆಮೋಕ್ರಾಟ್‌ ಗಳು ಕೆಳಮನೆಯನ್ನು ವಶಪಡಿಸಿಕೊಂಡಿದ್ದಾರೆ; ಇದೆ ವೇಳೆ ರಿಪಬ್ಲಿಕನ್‌ಗಳು ಸೆನೆಟ್‌ ಉಳಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. 

ಅಮೆರಿಕದ ಮಧ್ಯಾವಧಿ ಚುನಾವಣೆಯಲ್ಲಿ ಕತ್ತುಕತ್ತಿನ ಸ್ಪರ್ಧೆ ಏರ್ಪಟ್ಟಿದ್ದು ಇದೀಗ ಮತ ಎಣಿಕೆ ಸಾಗುತ್ತಿದೆ. ಮತದಾರರು ಪ್ರತಿನಿಧಿ ಸಭೆಗೆ (ಕೆಳಮನೆಗೆ) ಮತ್ತು ಸೆನೆಟ್‌ಗೆ (ಮೇಲ್ಮನೆಗೆ) ಸದಸ್ಯರನ್ನು ಚುನಾಯಿಸುವ ಚುನಾವಣೆ ಇದಾಗಿದೆ. 

ಅಮೆರಿಕ ಮಧ್ಯಾವಧಿ ಚುನಾವಣೆಗಳನ್ನು ಪ್ರತೀ ನಾಲ್ಕು ವರ್ಷಕ್ಕೊಮ್ಮೆ ನಡೆಸಲಾಗುತ್ತದೆ. ಈ ಬಾರಿ ಚುನಾವಣೆಯಿಂದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಭವಿಷ್ಯ ರೂಪುಗೊಳ್ಳುತ್ತದೆ. 2019ರ ಜನವರಿಯಲ್ಲಿ ಟ್ರಂಪ್‌ ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಸ್ಪರ್ಧಿಸಲಿರುವುದೇ ಈ ಮಧ್ಯಾವಧಿ ಚುನಾವಣೆಗೆ ಇನ್ನಿಲ್ಲದ ಮಹತ್ವ ದೊರಕಿದೆ. 

ಟ್ರಂಪ್‌ ಅವರು ತಮ್ಮ ಎರಡನೇ ಅಧ್ಯಕ್ಷೀಯ ಅವಧಿಗಾಗಿ ಮಧ್ಯಾವಧಿ ಚುನಾವಣೆ ವೇಳೆ ತಡೆರಹಿತ ಪ್ರಚಾರಾಭಿಯಾನ ಕೈಗೊಂಡಿದ್ದರು. ರಿಪಬ್ಲಿಕನ್‌ ಪಕ್ಷಕ್ಕೆ ಸೀಟು ಸಿಗುವ ಸಂಭಾವ್ಯತೆ ಇರುವಲ್ಲೆಲ್ಲ ಟ್ರಂಪ್‌ ಹೆಚ್ಚಿನ ಮಹತ್ವ ನೀಡಿದ್ದರು.

ತಾಜಾ ಮಾಹಿತಿ ಪ್ರಕಾರ ಡೆಮೊಕ್ರಾಟ್‌ಗಳು ಕೆಳಮನೆಯಲ್ಲಿ 23 ಸ್ಥಾನಗಳನ್ನು ಬಾಚಿಕೊಂಡಿದ್ದಾರೆ. ಜಿಓಪಿ ನಿಯಂತ್ರಣ ಹೊಂದಲು ಅವಶ್ಯವಿರುವ 218 ಸ್ಥಾನಗಳತ್ತ ಡೆಮೋಕ್ರಾಟ್‌ಗಳು ದಾಪುಗಾಲಿ ಇಡುತ್ತಿರುವುದಕ್ಕೆ ಇದು ಸೂಚನೆಯಾಗಿದೆ. 

ಮಾಜಿ ರಿಪಬ್ಲಿಕನ್‌ ಅಧ್ಯಕ್ಷೀಯ ಅಭ್ಯರ್ಥಿ ಮಿಟ್‌ ರಾಮ್ನಿ ಅವರು ಉಟಾ ಸೆನೆಟ್‌ ಸ್ಥಾನವನ್ನು ಜೆನಿ ವಿಲ್ಸನ್‌ ವಿರುದ್ಧ ಗೆದ್ದುಕೊಂಡಿದ್ದಾರೆ. 

Trending videos

Back to Top