CONNECT WITH US  

ತೈಲ ಬೆಲೆ ನಿಯಂತ್ರಿಸಲು 8ರಾಷ್ಟ್ರಗಳಿಗೆ ತಾತ್ಕಾಲಿಕ ವಿನಾಯಿತಿ:ಟ್ರಂಪ್

ವಾಷಿಂಗ್ಟನ್‌: ಜಾಗತಿಕ ತೈಲ ಬೆಲೆಗಳನ್ನು ನಿಯಂತ್ರಣದಲ್ಲಿರಿಸುವ ಮತ್ತು ಮಾರುಕಟ್ಟೆಯಲ್ಲಿ ಆಘಾತವುಂಟಾಗುವುದನ್ನು ತಡೆಯುವ ಸಲುವಾಗಿ ಇರಾನ್‌ನಿಂದ ತೈಲ ಆಮದು ಮಾಡುವುದರ ಮೇಲೆ ವಿಧಿಸ ಲಾಗಿರುವ ನಿಷೇಧದಿಂದ ಭಾರತ ಮತ್ತು ಚೀನ ಸಹಿತ 8 ರಾಷ್ಟ್ರಗಳಿಗೆ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆಯೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹೇಳಿದ್ದಾರೆ. 

ಇರಾನ್‌ ಆಡಳಿತದ ವರ್ತನೆಯನ್ನು ತಿದ್ದುವ ಸಲುವಾಗಿ ಅಮೆರಿಕ ಸೋಮವಾರ ಇರಾನ್‌ ಮೇಲೆ ಅತೀ ಕಠಿನ ನಿರ್ಬಂಧಗಳನ್ನು ವಿಧಿಸಿತ್ತು. ಇರಾನ್‌ನ ಬ್ಯಾಂಕಿಂಗ್‌ ಮತ್ತು ಇಂಧನ ಕ್ಷೇತ್ರಗಳು ನಿರ್ಬಂಧಕ್ಕೆ ಒಳಪಟ್ಟಿವೆ. ಇರಾನ್‌ನಿಂದ ತೈಲ ಆಮದನ್ನು ಮುಂದುವರಿಸುವ ಯೂರೋಪ್‌, ಏಷ್ಯಾ ಮತ್ತು ಇತರೆಡೆಯ ರಾಷ್ಟ್ರಗಳು ಹಾಗೂ ಕಂಪೆನಿಗಳ ಮೇಲೆ ದಂಡವನ್ನು ವಿಧಿಸಲು ಟ್ರಂಪ್‌ ಆಡಳಿತ ನಿರ್ಧರಿಸಿದೆ.

ಆದರೆ ಎಂಟು ರಾಷ್ಟ್ರಗಳಾದ ಭಾರತ, ಚೀನ, ಇಟೆಲಿ, ಗ್ರೀಸ್‌, ಜಪಾನ್‌, ದಕ್ಷಿಣ ಕೊರಿಯ, ತೈವಾನ್‌ ಮತ್ತು ಟರ್ಕಿ ಇವು ಇರಾನ್‌ನಿಂದ ಕೊಳ್ಳುವ ತೈಲದ ಪ್ರಮಾಣವನ್ನು ಗಣನೀಯವಾಗಿ ಇಳಿಕೆ ಮಾಡಿರುವುದರಿಂದ ಅವುಗಳಿಗೆ ತೈಲ ಖರೀದಿಯನ್ನು ತಾತ್ಕಾ ಲಿಕವಾಗಿ ಮುಂದುವರಿಸುವುದಕ್ಕೆ ಅವಕಾಶ ವೀಯಲಾಗಿದೆ ಎಂದು ವಿದೇಶಾಂಗ ಸಚಿವ ಮೈಕ್‌ ಪಾಂಪಿಯೊ ಸ್ಪಷ್ಟಪಡಿಸಿದ್ದಾರೆ.

ನಾವು ತೀರಾ ಕಠಿನ ನಿಷೇಧ ಹೇರುವುದರಲ್ಲಿ ದ್ದೇವು. ಆದರೆ ಜಗತ್ತಿನಾದ್ಯಂತ ತೈಲ ಬೆಲೆ ಏರುಗತಿಯಲ್ಲಿರುವುದರಿಂದ ಜನರಿಗೆ ಸಮಸ್ಯೆ ಆಗಬಾರದೆಂದು ತಾತ್ಕಾಲಿಕವಾಗಿ ಕೆಲವು ದೇಶಗಳಿಗೆ ವಿನಾಯಿತಿ ನೀಡಿದ್ದೇವೆ. ಇರಾನ್‌ ಈಗಲೂ ಸರಿ ದಾರಿಗೆ ಬಾರದಿದ್ದಲ್ಲಿ ಅನಿವಾರ್ಯವಾಗಿ ಕಠಿನಾತಿಕಠಿನ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮೈಕ್‌ ಪಾಂಪಿಯೊ ತಿಳಿಸಿದ್ದಾರೆ.

ತೈಲ ಬೆಲೆ ಇಳಿಕೆ 
ಹೊಸದಿಲ್ಲಿ: ತೈಲ ಬೆಲೆ ಮಂಗಳವಾರ ಕೂಡ ಅಲ್ಪ ಇಳಿಕೆಯಾಗಿದೆ. ದಿಲ್ಲಿಯಲ್ಲಿ ಪೆಟ್ರೋಲ್‌ ಬೆಲೆ ಪೈಸೆ ಇಳಿಕೆಯಾಗಿದ್ದರೆ, ಡೀಸೆಲ್‌ ಬೆಲೆ 9 ಪೈಸ್‌ ಇಳಿಕೆಯಾಗಿದೆ. ಪ್ರಸ್ತುತ ದಿಲ್ಲಿಯಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 78.42 ರೂ.ಗಳಿದ್ದರೆ, ಡೀಸೆಲೆ ಬೆಲೆ 73.07 ರೂ. ಇದೆ.

Trending videos

Back to Top