CONNECT WITH US  

ಚಬಹಾರ್‌ ಬಂದರಿಗೂ ಸಿಕ್ಕಿತು ವಿನಾಯಿತಿ

ವಾಷಿಂಗ್ಟನ್‌: ಇರಾನ್‌ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಬಗ್ಗೆ ಅಮೆರಿಕ ಸರ್ಕಾರದಿಂದ ವಿನಾಯಿತಿ ಪಡೆದುಕೊಂಡ ಭಾರತ ಈಗ ಚಬಹಾರ್‌ನಲ್ಲಿ ನಿರ್ಮಿಸುತ್ತಿರುವ ಬಂದರು ಯೋಜನೆಗಳಿಗೂ ವಿನಾಯಿತಿ ಪಡೆದುಕೊಂಡಿದೆ. ಅಫ್ಘಾನಿಸ್ತಾನ ಮೂಲಕ ರೈಲು ಮಾರ್ಗ ನಿರ್ಮಾಣ ಯೋಜನೆಗೂ ಈ ವಿನಾಯಿತಿ ಅನ್ವಯವಾಗುತ್ತದೆ ಎಂದು ವಿದೇಶಾಂಗ ಇಲಾಖೆ ವಕ್ತಾರರು ಬುಧವಾರ ತಿಳಿಸಿದ್ದಾರೆ. ಸೋಮವಾರವಷ್ಟೇ ಟ್ರಂಪ್‌ ಸರಕಾರ ಇರಾನ್‌ ಮೇಲೆ ಇದುವರೆಗಿನ ಅತ್ಯಂತ ಕಠಿಣ ಆರ್ಥಿಕ ದಿಗ್ಬಂಧನೆ ನಿಯಮಗಳನ್ನು ಜಾರಿ ಮಾಡಿತ್ತು. 
2016ರ ಮೇನಲ್ಲಿ ಭಾರತ, ಇರಾನ್‌ ಮತ್ತು ಅಫ್ಘಾನಿಸ್ತಾನ ಸಾರಿಗೆ ಕ್ಷೇತ್ರದಲ್ಲಿ ಮಾಡಿಕೊಂಡ ಒಪ್ಪಂದದ ಅನ್ವಯ ಚಬಹಾರ್‌ ಬಂದರಿಗೆ ಸಂಪರ್ಕ ಕಲ್ಪಿಸಲೋಸುಗ ರಸ್ತೆ ಮತ್ತು ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದವು.

Trending videos

Back to Top