ಕೆಂಪು ಕುಬ್ಜ ಗ್ರಹವನ್ನು ಕಂಡುಹಿಡಿದ ವಿಜ್ಞಾನಿಗಳು
Team Udayavani, Nov 16, 2018, 7:20 AM IST
ಪ್ಯಾರಿಸ್: ನಮ್ಮ ಸೂರ್ಯನಿಗೆ ಅತ್ಯಂತ ಸಮೀಪದಲ್ಲೊಂದು ನಕ್ಷತ್ರವಿರುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದು, ಇದು ನಮ್ಮ ಭೂಮಿಗಿಂತ 3.2 ಪಟ್ಟು ದೊಡ್ಡದಾಗಿದೆ ಎಂದಿದ್ದಾರೆ. ಭೂಮಿಯಿಂದ ಕೇವಲ ಎಂಟು ಜ್ಯೋತಿರ್ವರ್ಷ ದೂರದಲ್ಲಿರುವ ಈ ಕೆಂಪು ಕುಬ್ಜ ಗ್ರಹ ವಿಪರೀತ ಕಡಿಮೆ ತಾಪಮಾನ ಹೊಂದಿರುವುದರಿಂದ ಇದನ್ನು ಶೀತಗಟ್ಟಿದ ನಕ್ಷತ್ರ ಎಂದು ವ್ಯಾಖ್ಯಾನಿಸಲಾಗಿದೆ. ಇದನ್ನು ಬರ್ನಾಡ್ಸ್ ಸ್ಟಾರ್ ಎಂದು ಹೆಸರಿಸಲಾಗಿದೆ. ಕೆಟಲೋನಿಯಾ ಹಾಗೂ ಸ್ಪೇನ್ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ಇದನ್ನು ಕಂಡು ಕೊಂಡಿದೆ.
ಇದು ನಮ್ಮ ಭೂಮಿಯ ನೆರೆಹೊರೆಯಲ್ಲಿರುವ ಕಾರಣ ನಮಗೆ ಅತ್ಯಂತ ಪ್ರಮುಖವಾದದ್ದಾಗಿದೆ. ಮುಂದೊಂದು ದಿನ ಇದು ಭೂಮಿಗೆ ಇನ್ನಷ್ಟು ಸಮೀಪದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಕೆಟಲೋನಿಯಾ ಸ್ಪೇಸ್ ಸ್ಟಡೀಸ್ನ ಸಂಶೋಧಕ ಇಗ್ನಾಸಿ ರಿಬಾಸಿ ಹೇಳಿದ್ದಾರೆ. ಆದರೆ ಅಚ್ಚರಿಯೆಂದರೆ, ಇದು ಸೂರ್ಯನ ಬಳಿಯೇ ಇದ್ದರೂ, ಭೂಮಿಗಿಂತ ಕಡಿಮೆ ಪ್ರಮಾಣದ ಬೆಳಕು ಹಾಗೂ ಉಷ್ಣತೆಯನ್ನು ಪಡೆಯುತ್ತದೆ. ಇಲ್ಲಿ ಅಂದಾಜು ಮೈನಸ್ 170 ಡಿಗ್ರಿ ತಾಪಮಾನ ಇದೆ ಎಂದು ಹೇಳ ಲಾಗಿದೆ. ಹೀಗಾಗಿ ಇಲ್ಲಿ ಜೀವ ಜಂತು ಇರುವ ಸಾಧ್ಯತೆಯೇ ಇಲ್ಲ. ದ್ರವರೂಪದಲ್ಲಿ ನೀರು ಇಲ್ಲಿಲ್ಲ. ನೀರು ಇದ್ದರೂ ಅದು ಘನ ರೂಪ ಅಥವಾ ಅನಿಲ ರೂಪದಲ್ಲಿರಬಹುದು. ಈ ನಕ್ಷತ್ರವು ಗಂಟೆಗೆ 5 ಲಕ್ಷ ಕಿ.ಮೀ ವೇಗದಲ್ಲಿ ಚಲಿ ಸುತ್ತಿದ್ದು, ಇದನ್ನು ಬಾಹ್ಯಾಕಾಶದಲ್ಲಿ ಅತ್ಯಂತ ವೇಗವಾಗಿ ಚಲಿಸುತ್ತಿರುವ ನಕ್ಷತ್ರ ಎಂದೂ ಗುರುತಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ