ಅಫ್ಘಾನಿಸ್ಥಾನ : ತಾಲಿಬಾನ್ಉಗ್ರರ ಹೊಂಚು ದಾಳಿ; 22 ಪೊಲೀಸರು ಬಲಿ
Team Udayavani, Nov 26, 2018, 4:31 PM IST
ಹೇರತ್, ಅಫ್ಘಾನಿಸ್ಥಾನ : ಪಶ್ಚಿಮ ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಉಗ್ರರು ನಡೆಸಿದ ಹೊಂಚು ದಾಳಿಗೆ ಕನಿಷ್ಠ 22 ಪೊಲೀಸರು ಮೃತಪಟ್ಟರೆಂದು ಆರೋಗ್ಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಈಗಾಗಲೇ ಸಾಕಷ್ಟು ಸೈನಿಕರನ್ನು ಕಳೆದುಕೊಂಡಿರುವ ಅಫ್ಘಾನ್ ಸೇನೆಗೆ ಇದು ಇನ್ನೊಂದು ದೊಡ್ಡ ಪ್ರಹಾರವೆಂದು ತಿಳಿಯಲಾಗಿದೆ.
ಅಫ್ಘಾನಿಸ್ಥಾನದಲ್ಲಿ ಈಚಿನ ದಿನಗಳಲ್ಲಿ ಭದ್ರತಾ ಸಿಬಂದಿಗಳ ಮೇಲೆ ಉಗ್ರರ ಸರಣಿ ದಾಳಿಗಳು ನಡೆಯುತ್ತಿದೆ. ಫರಾ ಪ್ರಾಂತ್ಯದಲ್ಲಿ ನಡೆದಿರುವ ಈ ಹೊಸ ದಾಳಿಯಲ್ಲಿ 22 ಪೊಲೀಸರು ಹತರಾಗಿದ್ದಾರೆ.
ಮೊನ್ನೆ ಶುಕ್ರವಾರವಷ್ಟೇ ಸೇನಾ ನೆಲೆಯೊಳಗಿನ ಮಸೀದಿಯೊಂದರ ಮೇಲೆ ತಾಲಿಬಾನ್ ಉಗ್ರರ ಆತ್ಮಾಹುತಿ ದಾಳಿ ನಡೆದಿತ್ತು.
ಇದೇ ವೇಳೆ 17 ವರ್ಷಗಳ ಸಮರವನ್ನು ಕೊನೆಗೊಳಿಸುವಂತೆ ತಾಲಿಬಾನ್ ಮನ ಒಲಿಸುವ ಯತ್ನಗಳು ಈಗ ಜಾರಿಯಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ