CONNECT WITH US  

ಒಪೆಕ್‌ನಿಂದ ಕತಾರ್‌ ಹೊರಕ್ಕೆ

ನೈಸರ್ಗಿಕ ಅನಿಲ ಸರಬರಾಜು ಕ್ಷೇತ್ರದಲ್ಲಿ ಸಬಲವಾಗುವ ಕನಸು

ದುಬಾೖ: ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟವಾದ 'ಒಪೆಕ್‌'ನಿಂದ ಹೊರಬರುವುದಾಗಿ ಕತಾರ್‌ ಸೋಮವಾರ ಪ್ರಕಟಿಸಿದೆ. ಕತಾರ್‌ನ ಇಂಧನ ಸಚಿವ ಸಾದ್‌ ಶೆರಿದಾ ಅಲ್‌- ಕಾಬಿ ಅವರು ಈ ಬಗ್ಗೆ ಘೋಷಿಸಿದ್ದಾರೆ. ನೈಸರ್ಗಿಕ ಅನಿಲದ ದೈತ್ಯ ಸಂಪನ್ಮೂಲವನ್ನೇ ಹೊಂದಿರುವ ಕತಾರ್‌, ಅನಿಲ ರಫ್ತಿನಲ್ಲಿ ಜಗತ್ತಿನ ಮೂರನೇ ಅತಿ ದೊಡ್ಡ ದೇಶವಾಗಿದ್ದು, 1960ರಲ್ಲಿ ಸ್ಥಾಪಿತವಾಗಿರುವ ಒಪೆಕ್‌ನಿಂದ ಹೊರಬರುತ್ತಿರುವ ಮೊದಲ ರಾಷ್ಟ್ರವೆನಿಸಿದೆ.

'ಕತಾರ್‌ ದೇಶವು ಸದ್ಯಕ್ಕೆ ವಾರ್ಷಿಕವಾಗಿ 77 ದಶಲಕ್ಷ ಟನ್‌ಗಳಷ್ಟು ನೈಸರ್ಗಿಕ ಅನಿಲ ರಫ್ತು ಮಾಡುತ್ತಿದೆ. ಇದನ್ನು ವಾರ್ಷಿಕ 110 ದಶಲಕ್ಷ ಟನ್‌ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಜತೆಗೆ, ದೈನಂದಿನ ತೈಲ ಉತ್ಪಾದನೆಯನ್ನು 4.8 ದಶಲಕ್ಷ ಬ್ಯಾರೆಲ್‌ಗ‌ಳಿಂದ 6.5 ದಶಲಕ್ಷ ಬ್ಯಾರೆಲ್‌ಗ‌ಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಹಾಗಾಗಿ, ತಾನು ಒಪೆಕ್‌ನಿಂದ ಹೊರಬರಲು ತೀರ್ಮಾನಿಸಿರುವುದಾಗಿ ಕತಾರ್‌ ಹೇಳಿದೆ. ಜಾಗತಿಕ ಮಟ್ಟದಲ್ಲಿ ಕತಾರ್‌ನ ಸ್ಥಾನಮಾನ ಸದೃಢಗೊಳಿಸಲು ಇದು ಅನಿವಾರ್ಯ ಎಂದು ಸಚಿವರು ತಿಳಿಸಿದ್ದಾರೆ.

ಹೊರಬರುವುದು ಅನಿವಾರ್ಯವೇ?: ಈ ಹಿಂದೆ ಅತಿಯಾದ ಉತ್ಪಾದನೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕುಸಿದಿತ್ತು. 2016ರಲ್ಲಿ ಒಪೆಕ್‌ ಒಕ್ಕೂಟ ತನ್ನ ಸದಸ್ಯ ರಾಷ್ಟ್ರಗಳ ತೈಲ ಉತ್ಪಾದನೆ ಮೇಲೆ ಮಿತಿ ಹೇರಿತ್ತು. ಈ ಇತಿಮಿತಿಯಲ್ಲಿ ಮುಂದುವರಿದರೆ ಸ್ವತಂತ್ರವಾಗಿ ತೈಲೋದ್ಯಮದ ದೈತ್ಯ ಶಕ್ತಿಯಾಗಿ ಬೆಳೆಯುವುದು ಸಾಧ್ಯ ವಿಲ್ಲ ಎಂದು ತಿಳಿದಿರುವ ಕತಾರ್‌ ಒಕ್ಕೂಟದಿಂದ ಹೊರಬರಲು ತೀರ್ಮಾನಿಸಿದೆ. 18 ತಿಂಗಳ ಕಾಲ ತಮ್ಮ ಮೇಲೆ ಹೇರಲಾದ ನಿರ್ಬಂಧಕ್ಕೂ, ಈ ನಿರ್ಧಾರಕ್ಕೂ ಸಂಬಂಧವಿಲ್ಲ ಎಂದೂ ಸ್ಪಷ್ಟಪಡಿಸಿದೆ.


Trending videos

Back to Top