ಒಪೆಕ್ನಿಂದ ಕತಾರ್ ಹೊರಕ್ಕೆ
Team Udayavani, Dec 4, 2018, 11:49 AM IST
ದುಬಾೖ: ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟವಾದ ‘ಒಪೆಕ್’ನಿಂದ ಹೊರಬರುವುದಾಗಿ ಕತಾರ್ ಸೋಮವಾರ ಪ್ರಕಟಿಸಿದೆ. ಕತಾರ್ನ ಇಂಧನ ಸಚಿವ ಸಾದ್ ಶೆರಿದಾ ಅಲ್- ಕಾಬಿ ಅವರು ಈ ಬಗ್ಗೆ ಘೋಷಿಸಿದ್ದಾರೆ. ನೈಸರ್ಗಿಕ ಅನಿಲದ ದೈತ್ಯ ಸಂಪನ್ಮೂಲವನ್ನೇ ಹೊಂದಿರುವ ಕತಾರ್, ಅನಿಲ ರಫ್ತಿನಲ್ಲಿ ಜಗತ್ತಿನ ಮೂರನೇ ಅತಿ ದೊಡ್ಡ ದೇಶವಾಗಿದ್ದು, 1960ರಲ್ಲಿ ಸ್ಥಾಪಿತವಾಗಿರುವ ಒಪೆಕ್ನಿಂದ ಹೊರಬರುತ್ತಿರುವ ಮೊದಲ ರಾಷ್ಟ್ರವೆನಿಸಿದೆ.
‘ಕತಾರ್ ದೇಶವು ಸದ್ಯಕ್ಕೆ ವಾರ್ಷಿಕವಾಗಿ 77 ದಶಲಕ್ಷ ಟನ್ಗಳಷ್ಟು ನೈಸರ್ಗಿಕ ಅನಿಲ ರಫ್ತು ಮಾಡುತ್ತಿದೆ. ಇದನ್ನು ವಾರ್ಷಿಕ 110 ದಶಲಕ್ಷ ಟನ್ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಜತೆಗೆ, ದೈನಂದಿನ ತೈಲ ಉತ್ಪಾದನೆಯನ್ನು 4.8 ದಶಲಕ್ಷ ಬ್ಯಾರೆಲ್ಗಳಿಂದ 6.5 ದಶಲಕ್ಷ ಬ್ಯಾರೆಲ್ಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಹಾಗಾಗಿ, ತಾನು ಒಪೆಕ್ನಿಂದ ಹೊರಬರಲು ತೀರ್ಮಾನಿಸಿರುವುದಾಗಿ ಕತಾರ್ ಹೇಳಿದೆ. ಜಾಗತಿಕ ಮಟ್ಟದಲ್ಲಿ ಕತಾರ್ನ ಸ್ಥಾನಮಾನ ಸದೃಢಗೊಳಿಸಲು ಇದು ಅನಿವಾರ್ಯ ಎಂದು ಸಚಿವರು ತಿಳಿಸಿದ್ದಾರೆ.
ಹೊರಬರುವುದು ಅನಿವಾರ್ಯವೇ?: ಈ ಹಿಂದೆ ಅತಿಯಾದ ಉತ್ಪಾದನೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕುಸಿದಿತ್ತು. 2016ರಲ್ಲಿ ಒಪೆಕ್ ಒಕ್ಕೂಟ ತನ್ನ ಸದಸ್ಯ ರಾಷ್ಟ್ರಗಳ ತೈಲ ಉತ್ಪಾದನೆ ಮೇಲೆ ಮಿತಿ ಹೇರಿತ್ತು. ಈ ಇತಿಮಿತಿಯಲ್ಲಿ ಮುಂದುವರಿದರೆ ಸ್ವತಂತ್ರವಾಗಿ ತೈಲೋದ್ಯಮದ ದೈತ್ಯ ಶಕ್ತಿಯಾಗಿ ಬೆಳೆಯುವುದು ಸಾಧ್ಯ ವಿಲ್ಲ ಎಂದು ತಿಳಿದಿರುವ ಕತಾರ್ ಒಕ್ಕೂಟದಿಂದ ಹೊರಬರಲು ತೀರ್ಮಾನಿಸಿದೆ. 18 ತಿಂಗಳ ಕಾಲ ತಮ್ಮ ಮೇಲೆ ಹೇರಲಾದ ನಿರ್ಬಂಧಕ್ಕೂ, ಈ ನಿರ್ಧಾರಕ್ಕೂ ಸಂಬಂಧವಿಲ್ಲ ಎಂದೂ ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
MUST WATCH
ಹೊಸ ಸೇರ್ಪಡೆ
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್