CONNECT WITH US  

ಕಾಶ್ಮೀರ ವಿವಾದ ಬಗೆಹರಿಯುತ್ತಿತ್ತು ಎಂದಿದ್ದ ಅಟಲ್‌ ಜೀ

ಇಸ್ಲಾಮಾಬಾದ್‌: ಬಿಜೆಪಿ 2004ರ ಲೋಕಸಭೆ ಚುನಾವಣೆಯಲ್ಲಿ ಸೋಲದೇ ಇರುತ್ತಿದ್ದರೆ, ಕಾಶ್ಮೀರ ವಿವಾದ ಬಗೆಹರಿಯುತ್ತಿತ್ತು ಎಂದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ತಮಗೆ ಹೇಳಿದ್ದರು ಎಂದು ಪಾಕಿಸ್ಥಾನದ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ. ಮಂಗಳವಾರ ಸುದ್ದಿ ವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಅಂದಿನ ವಿದೇಶಾಂಗ ಸಚಿವ ನಟವರ್‌ ಸಿಂಗ್‌ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಇಬ್ಬರೂ ನಾಯಕರ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಭಾರತ-ಪಾಕ್‌ ಕಾಶ್ಮೀರ ವಿವಾದವನ್ನು ಬಗೆಹರಿಸುವ ಅಂಚಿನಲ್ಲಿದ್ದವು ಎಂಬುದು ತಿಳಿಯುತ್ತದೆ ಎಂದೂ ಹೇಳಿದ್ದಾರೆ.


Trending videos

Back to Top