CONNECT WITH US  

ನ್ಯೂ ಕ್ಯಾಲೆಡೋನಿಯಾ ಭೂಕಂಪ: ಸುನಾಮಿ, ಜೀವ ಹಾನಿ ಇಲ್ಲ

ನೋಮಿಯಾ : ನ್ಯೂ ಕ್ಯಾಲೆಡೋನಿಯಾ ಸಮೀಪ ನಿನ್ನೆ ಮಂಗಳವಾರ ಸಂಭವಿಸಿದ 7.5 ಅಂಕಗಳ ತೀವ್ರತೆಯ ಅತ್ಯಂತ ಪ್ರಬಲ ಭೂಕಂಪದ ಪರಿಣಾಮವಾಗಿ ದಕ್ಷಿಣ ಶಾಂತಸಾಗರದ ಆದ್ಯಂತ ಅತ್ಯಂತ ವಿನಾಶಕಾರಿ ಸುನಾಮಿ ಹೆದ್ದೆರೆಗಳು ಏಳುವವೆಂಬ ಎಚ್ಚರಿಕೆಯನ್ನು ನೀಡಲಾಗಿದ್ದ ಹೊರತಾಗಿಯೂ ಅಂತಹ ಯಾವುದೇ ಗಂಭೀರ ಹಾನಿ, ಸಾವು ನೋವು, ಗಾಯ ಇತ್ಯಾದಿಗಳು ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ. 

7.5 ಅಂಕಗಳ ತೀವ್ರತೆಯನ್ನು ಅನುಸರಿಸಿ ಕನಿಷ್ಠ 20 ಪಶ್ಚಾತ್‌ ಕಂಪನಗಳು ಸಂಭವಿಸಿದ್ದವು. ಇವು ನ್ಯೂ ಕಾಲೆಡೋನಿಯಾದ ಲಾಯಲ್ಟಿ ದ್ವೀಪಗಳ 170 ಕಿ.ಮೀ. ಆಗ್ನೇಯ ಭಾಗದಲ್ಲಿ 10 ಕಿ.ಮೀ. ಆಳದಲ್ಲಿ ಕೇಂದ್ರೀಕೃತವಾಗಿದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ. 

ಆರಂಭಿಕ ಭೂಕಂಪವನ್ನು ಅನುಸರಿಸಿ ಅನೇಕ ಕಟ್ಟಡಗಳ ಗೋಡೆಗಳು ಅಲುಗಾಡಿದವು ಮತ್ತು ಸಮುದ್ರ ತಟದ ಹಲವು ಭಾಗಗಳಲ್ಲಿ ವಿಪರೀತ ನೊರೆ ಕಂಡು ಬಂತು ಎಂದು ದ್ವೀಪವಾಸಿಗಳು ಹೇಳಿದ್ದಾರೆ.

Trending videos

Back to Top