CONNECT WITH US  

ಹಸೀನಾಗೆ 4ನೇ ಬಾರಿ ಪ್ರಧಾನಿ ಹುದ್ದೆ?

ಢಾಕಾ: ಬಾಂಗ್ಲಾದೇಶದಲ್ಲಿ ಭಾನುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಹಾಲಿ ಪ್ರಧಾನಿ ಶೇಖ್‌ ಹಸೀನಾ ಮತ್ತೂಮ್ಮೆ ಅಧಿಕಾರಕ್ಕೇರುವ ಸಾಧ್ಯತೆಗಳಿವೆ. ಸ್ಥಳೀಯ ಸುದ್ದಿವಾಹಿನಿಗಳಲ್ಲಿ ಆರಂಭದ ಫ‌ಲಿತಾಂಶಗಳ ಟ್ರೆಂಡ್‌ ಪ್ರಕಟವಾಗಿದ್ದು, ಶೇಖ್‌ ಹಸೀನಾ ಪಕ್ಷ ಬಾಂಗ್ಲಾದೇಶ ಅವಾಮಿ ಲೀಗ್‌ ಮುಂಚೂಣಿಯಲ್ಲಿದೆ. ಪ್ರತಿಪಕ್ಷ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿಯು ಆರಂಭಿಕ ಟ್ರೆಂಡ್‌ ಪ್ರಕಾರ ಒಂದು ಕ್ಷೇತ್ರದಲ್ಲೂ ಗೆದ್ದಿರಲಿಲ್ಲ.

ಭಾನುವಾರ ಮತದಾನ ನಡೆ ದಿದ್ದು ಹಲವೆಡೆ ಹಿಂಸಾಚಾರ ವರದಿಯಾಗಿದೆ. ಒಟ್ಟು 17 ಜನರು ಸಾವನ್ನಪ್ಪಿದ್ದು, ಈ ಪೈಕಿ ಹಿಂಸಾಚಾರ ನಡೆಸುತ್ತಿದ್ದ ಮೂವರನ್ನು ಪೊಲೀಸರೇ ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಹಿಂಸಾಚಾರ ನಿಯಂತ್ರಿಸಲು ದೇಶಾದ್ಯಂತ ಸೇನೆ ಯನ್ನು ನಿಯೋಜಿಸಲಾಗಿದೆ. ಹಿಂಸಾಚಾರ ಹಾಗೂ ಗಲಭೆಯಿಂದಾಗಿ ಮತಗಟ್ಟೆಗೆ ಮತದಾರರು ಬರಲು ಹೆದರುವಂಥ ಪರಿಸ್ಥಿತಿ ಇತ್ತು. ಶೇಕಡಾವಾರು ಮತದಾನದ ಪ್ರಮಾಣ ಕಡಿಮೆ ಆಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Trending videos

Back to Top